bhoomi
ಭೂಮಿ ಅದರಿಂದಾಗಿಯೇ ಇಷ್ಟೆಲ್ಲಾ ಆಗಿದೆಯೇ ಎಂಬುದೇ ನನ್ನ ಚಿಂತೆಗೆ ಕಾರಣವಾಗಿತ್ತು. ಆದರೆ ಒಂದು ಸಣ್ಣ ಕಬ್ಬಿಣದ ತುಂಡಿನಿಂದ ಹೊಡೆದ ಪೆಟ್ಟು ಇಷ್ಟು ಜೋರಾದ ಶಬ್ಧ ಹೊರಡಿಸುವುದು ಸಾಧ್ಯವಿಲ್ಲ ಎಂದುಕೊಂಡ ನಾನು, ಹೊರಗೆ ಹೋಗಿ ನೋಡುವುದು ಅವಶ್ಯಕ ಎಂದುಕೊಂಡೆ. ಆಗಿದ್ದಿಷ್ಟು, ನಮ್ಮ ಮನೆಯ ಹತ್ತಿರದಲ್ಲೇ ಇರುವ ನರಸಿಂಹ ಪರ್ವತದಲ್ಲಿ ಒಂದು ಗುಹೆ ಇದ್ದಿದ್ದು ನಮಗೆ ಬಾಲ್ಯದಿಂದಲೂ ಕುತೂಹಲ ಕೆರಳಿಸಿದ್ದ ವಿಷಯವಾಗಿತ್ತು, ಆದರೆ ಅದರೊಳಗೆ ಇಣುಕಿ ನೋಡುವುದು ಅಥವಾ ಅದರಿಂದ ಎಲ್ಲೆಲ್ಲಿಗೆ ದಾರಿಗಳು ತೆರೆದುಕೊಳ್ಳುತ್ತದೆ ಎಂಬುದರ ಬಗೆಗಿನ ವಿವರಗಳು ಯಾರಿಗೂ ತಿಳಿದಿರಲಿಲ್ಲ. ಅವರಿವರು ಹೇಳಿದ ಅಂತೆ ಕಂತೆಗಳೆಲ್ಲಾ ಸೇರಿ ನಮ್ಮ ಕುತೂಹಲವೂ ಬೆಳೆಯುತ್ತಾ ಹೋದರೂ ಕೂಡ, ನಮ್ಮಲ್ಲಿ ಯಾರಿಗೂ ಅದರ ಒಳಕ್ಕೆ ಹೋಗುವ ಧೈರ್ಯ ಬಂದಿರಲಿಲ್ಲ. ನಾವು ಬೆಳೆದರೂ ಗುಹೆಯ ಒಳಗಿಳಿಯಲು ಬೇಕಾದ ಧೈರ್ಯ ನಮ್ಮಲ್ಲಿ ಬೆಳೆಯಲೇ ಇಲ್ಲ. ಗೆಳೆಯರ ಗುಂಪಿನಲ್ಲಿದ್ದ ಎಲ್ಲರಿಗೂ ಸಹ ಚಾರಣ, ಸುತ್ತಾಟ ಸಾಹಸದ ಕೆಲಸಗಳೂ ಅಂದರೆ ಬಹಳ ಇಷ್ಟ, ಆದರೆ ಪರ್ವತದ ಬಳಿ ಇದ್ದ ಗುಹೆಯ ಬಗ್ಗೆ ಮಾತನಾಡಿದ ತಕ್ಷಣ ಎಲ್ಲರೂ ಬೇರೆ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಲು ಪ್ರಾರಂಭಿಸುತ್ತಿದ್ದರು ಅಥವಾ ವಿಷಯಾಂತರ ಮಾಡುತ್ತಿದ್ದರು. ಇದಕ್ಕೆಲ್ಲಾ ಕಾರಣ ಗುಹೆಯ ಬಗೆಗಿದ್ದ ಕತೆಗಳು. ವಾರದ ಕೊನೆಯೊಂದರಲ್ಲಿ ನಾನು ಪರ್ವತದ ಗುಹೆಯ ಅನ್ವೇಷಣೆಗೆ ಹೊರಟು ನಿಂತೆ. ಯಾರು ಬರಲಿ ಬಿಡಲಿ ನಾ...