Posts

Showing posts from November, 2011

article about navodaya

ನವೋದಯದಲ್ಲಿ ಅರಳಿದ ಕನಸುಗಳು ನನ್ನ ಅಣ್ಣ ತಮ್ಮಂದಿರು ಊರಿನಲ್ಲಿ ಸಹಜವಾಗಿ ಗೋಲಿ ಆಡಿಕೊಂಡು, ತೋಟ ಕಾಡು ಮೇಡು ಸುತ್ತಿಕೊಂಡು, ಬೇಕಾದಾಗ ಪೇಟೆಗೆ ಹೋಗಿಬಂದು, ಶಾಲೆಯಲ್ಲಿ ಚಡ್ಡಿ ದೋಸ್ತಿಗಳ ಜೊತೆ ಕುಣಿಯುತ್ತಿರಬೇಕಾದ್ರ್ರೆ ನಾನು ಮಾತ್ರ ಯಾಕೆ ದೂರದ ಶಾಲೆಯಲ್ಲಿ ಕಲಿಯಬೇಕು? ಎನ್ನುವುದು ನಾನು ನವೋದಯ ಸೇರಿದ ನಂತರ ನನ್ನಲ್ಲಿ ಸುಪ್ತನಾಗಿದ್ದ ಬಂಡಾಯಗಾರನ ಮೊದಲ ಪ್ರಶ್ನೆಯಾಗಿತ್ತು. ಅದಕ್ಕೇ ಆರನೇ ಕ್ಲಾಸಿನಲ್ಲಿದ್ದ ಗೆಳೆಯರೆಲ್ಲ ಸೇರಿ ಭಾನುವಾರದ ಒಂದು ದಿನ ಹೀಗೆ ಸುತ್ತಾಡಿಕೊಂಡು ಬರೋಣವೆಂದು ಹೊರಟೆವು.., ಡಾಮರ್ಿಟರಿ ಹಿಂದೆ ದುರ್ಬಲವಾಗಿದ್ದ ಬೇಲಿಯನ್ನು ಭೇಧಿಸಿ ಹೊರಟ ನಾವುಗಳು, ಸಂಪೂರ್ಣ ಸ್ವತಂತ್ರರಾಗಿದ್ದೇವೆ ಎಂಬ ಕಲ್ಪನೆಯೊಡನೆ ಕಾಫೀ ತೋಟಗಳ ನಡುವೆ ನಡೆಯುತ್ತಾ ಸಾಗಿದೆವು. ಮಧ್ಯೆ ಚಕೋತ ಹಣ್ಣುಗಳು, ಅನಾಗರೀಕರಂತೆ ಎಳೆದಾಡಿ ಕಿತ್ತಾಡಿಕೊಂಡು ತಿನ್ನಲ್ಪಟ್ಟ ಹಲಸಿನ ಹಣ್ಣುಗಳು ನಮಗಾಗಿದ್ದ ಹಸಿವನ್ನು ಶಮನಗೊಳಿಸಿದ್ದವು. ಹೀಗೆ ಅಲ್ಲಿ ಇಲ್ಲಿ ಅಲೆದು ದಾರಿ ತಪ್ಪಿದ ನಮಗೆ ಬಾಳೆಹೊನ್ನೂರಿಗೆ ಅತೀ ಸಮೀಪದಲ್ಲಿ ಮುಖ್ಯ ರಸ್ತೆ ಸಿಕ್ಕೇ ಬಿಟ್ಟಿತು. ವಾಪಾಸ್ ನವೋದಯಕ್ಕೆ ಮುಖ್ಯ ದ್ವಾರದಿಂದ ಒಳನಡೆದ ನಮಗೆ ಶ್ರೀನಿವಾಸ್(ಮ್ಯಾತ್ಸ್) ಸರ್ ಹಾಗೂ ಇತರೆ ಶಿಕ್ಷಕರಿಂದ ಭವ್ಯ ಸ್ವಾಗತ ಸಿಕ್ಕಿತು. ಮುಂದಿನ ಕಥೆ ಇಲ್ಲಿ ಬರೆಯದಿದ್ದರೇ ಉತ್ತಮ. ಜಾಗಿಂಗ್ ಟೈಮಲ್ಲಿ ಇಲ್ಲದ ಜ್ವರ, ಸುಸ್ತು ಇನ್ನಿತರ ಕಾರಣಗಳು ನಮಗೆ ಸಿಕ್ಕೇ ಸಿಗುತ್ತಿತ...