article about navodaya
ನವೋದಯದಲ್ಲಿ ಅರಳಿದ ಕನಸುಗಳು
ನನ್ನ ಅಣ್ಣ ತಮ್ಮಂದಿರು ಊರಿನಲ್ಲಿ ಸಹಜವಾಗಿ ಗೋಲಿ ಆಡಿಕೊಂಡು, ತೋಟ ಕಾಡು ಮೇಡು ಸುತ್ತಿಕೊಂಡು, ಬೇಕಾದಾಗ ಪೇಟೆಗೆ ಹೋಗಿಬಂದು, ಶಾಲೆಯಲ್ಲಿ ಚಡ್ಡಿ ದೋಸ್ತಿಗಳ ಜೊತೆ ಕುಣಿಯುತ್ತಿರಬೇಕಾದ್ರ್ರೆ ನಾನು ಮಾತ್ರ ಯಾಕೆ ದೂರದ ಶಾಲೆಯಲ್ಲಿ ಕಲಿಯಬೇಕು? ಎನ್ನುವುದು ನಾನು ನವೋದಯ ಸೇರಿದ ನಂತರ ನನ್ನಲ್ಲಿ ಸುಪ್ತನಾಗಿದ್ದ ಬಂಡಾಯಗಾರನ ಮೊದಲ ಪ್ರಶ್ನೆಯಾಗಿತ್ತು.
ಅದಕ್ಕೇ ಆರನೇ ಕ್ಲಾಸಿನಲ್ಲಿದ್ದ ಗೆಳೆಯರೆಲ್ಲ ಸೇರಿ ಭಾನುವಾರದ ಒಂದು ದಿನ ಹೀಗೆ ಸುತ್ತಾಡಿಕೊಂಡು ಬರೋಣವೆಂದು ಹೊರಟೆವು.., ಡಾಮರ್ಿಟರಿ ಹಿಂದೆ ದುರ್ಬಲವಾಗಿದ್ದ ಬೇಲಿಯನ್ನು ಭೇಧಿಸಿ ಹೊರಟ ನಾವುಗಳು, ಸಂಪೂರ್ಣ ಸ್ವತಂತ್ರರಾಗಿದ್ದೇವೆ ಎಂಬ ಕಲ್ಪನೆಯೊಡನೆ ಕಾಫೀ ತೋಟಗಳ ನಡುವೆ ನಡೆಯುತ್ತಾ ಸಾಗಿದೆವು. ಮಧ್ಯೆ ಚಕೋತ ಹಣ್ಣುಗಳು, ಅನಾಗರೀಕರಂತೆ ಎಳೆದಾಡಿ ಕಿತ್ತಾಡಿಕೊಂಡು ತಿನ್ನಲ್ಪಟ್ಟ ಹಲಸಿನ ಹಣ್ಣುಗಳು ನಮಗಾಗಿದ್ದ ಹಸಿವನ್ನು ಶಮನಗೊಳಿಸಿದ್ದವು.
ಹೀಗೆ ಅಲ್ಲಿ ಇಲ್ಲಿ ಅಲೆದು ದಾರಿ ತಪ್ಪಿದ ನಮಗೆ ಬಾಳೆಹೊನ್ನೂರಿಗೆ ಅತೀ ಸಮೀಪದಲ್ಲಿ ಮುಖ್ಯ ರಸ್ತೆ ಸಿಕ್ಕೇ ಬಿಟ್ಟಿತು.
ವಾಪಾಸ್ ನವೋದಯಕ್ಕೆ ಮುಖ್ಯ ದ್ವಾರದಿಂದ ಒಳನಡೆದ ನಮಗೆ ಶ್ರೀನಿವಾಸ್(ಮ್ಯಾತ್ಸ್) ಸರ್ ಹಾಗೂ ಇತರೆ ಶಿಕ್ಷಕರಿಂದ ಭವ್ಯ ಸ್ವಾಗತ ಸಿಕ್ಕಿತು.
ಮುಂದಿನ ಕಥೆ ಇಲ್ಲಿ ಬರೆಯದಿದ್ದರೇ ಉತ್ತಮ.
ಜಾಗಿಂಗ್ ಟೈಮಲ್ಲಿ ಇಲ್ಲದ ಜ್ವರ, ಸುಸ್ತು ಇನ್ನಿತರ ಕಾರಣಗಳು ನಮಗೆ ಸಿಕ್ಕೇ ಸಿಗುತ್ತಿತ್ತು. ಇವ್ಯಾವುದೂ ಕೆಲಸ ಮಾಡದಿದ್ದಾಗ ಮೈದಾನದಲ್ಲಿ ಅಲ್ಲೇ ಮೂಲೆಯಲ್ಲಿ ನಿಂತು ಕೊನೇ ಸುತ್ತಿಗೆ ಸೇರಿಕೊಳ್ಳುತ್ತಿದ್ದೆವು.
ಯಾವಾಗಲೂ ಮನೆಯ ಕಡೆಯೇ ಇರುತ್ತಿದ್ದ ನಮ್ಮ ಮನಸ್ಸನ್ನು ಓದಿನ ಕಡೆಗೆ ಶೈಕ್ಷಣಿಕ ಹಾಗೂ ಇನ್ನಿತರ ಚಟುವಟಿಕೆಗಳತ್ತ ತಿರುಗಿಸಿದ ಕೀತರ್ಿ ನಮ್ಮ ನವೋದಯದ ಶಿಕ್ಷಕರಿಗೇ ಸಲ್ಲಬೇಕು.
ಹೇರೂರಿನ ಹಳ್ಳಕ್ಕೆ ಬಟ್ಟೆ ತೊಳೆಯುವ ನೆಪದಲ್ಲಿ ಪ್ರತೀ ಭಾನುವಾರ ಪಿಕ್ನಿಕ್ ಮಾಡುತ್ತಿದ್ದದ್ದನ್ನ ಎಂದಾದರೂ ಮರೆಯಲಾಗುತ್ತದೆಯೇ...
ನಮಗೆ ದಿನವೂ ನವೋದಯನ್ನು ನೆನಪು ಮಾಡಿಕೊಳ್ಳುವಂತಹ ಪ್ರಸಂಗಗಳು ಸಾಕಷ್ಟಿವೆ. ಅವು ದಿನವೂ ಬರುತ್ತಲೇ ಇರುತ್ತದೆ ಇಲ್ಲಿದೆ ಕೆಲವು ಉದಾಹರಣೆಗಳು..ಇವುಗಳು ಕೇವಲ ಉತ್ಪ್ರೇಕ್ಷೆಯ ಮಾತಲ್ಲ ಇಂತಹಾ ಮಾತುಗಳು ನಿಜ ಜೀವನದಲ್ಲಿ ನಡೆದಂತಹವುಗಳು
ಪ್ರಶ್ನೆ: ಇದೇನೋ ನಿನ್ನ ಶರ್ಟ ಬಟನ್ ನೀನೇ ಹೊಲಿದುಕೊಳ್ತಾ ಇದೀಯಾ?
ನಾನು: ನನಗೆ ಇದೆಲ್ಲಾ ಗೊತ್ತಿದೆ... ಹುಡುಗರಿಗೆ ಸೂಜಿಗೆ ದಾರ ಪೋಣಿಸೋಕು ಬರೋಲ್ಲ ಅನ್ನೋದು ಸುಳ್ಳು ಅರೋಪ.. ನಂಗೆ ಪಾರ್ವತಿ ಮೇಡಂ ಎಲ್ಲಾ ಹೇಳಿಕೊಟ್ಟಿದಾರೆ.
ಪ್ರಶ್ನೆ:ನೀನು ತೇಜಸ್ವಿ ಪುಸ್ತಕಗಳನ್ನ ಓದಿದೀಯಾ?
ನಾನು: ನವೋದಯದಲ್ಲಿದ್ದಾಗ ತುಂಬಾ ಪುಸ್ತಕಗಳು ಸಿಕ್ತಾ ಇದ್ವು.. ಆಗ ಓದಿದ್ದೆ,, ಮತ್ತೆ ಓದಿಲ್ಲ.
ಪ್ರಶ್ನೆ:ನಿನಗೆ ಬಟ್ಟೆ ಒಗೆಯೋಕೆ ಬರುತ್ತಾ?
ನಾನು: ಇಂತಾ ಪ್ರಶ್ನೆಗಳನ್ನ ಪದೇ ಪದೇ ಕೇಳಬೇಡಿ.. ನಾನು ನವೋದಯ ಸ್ಟೂಡೆಂಟ್...ನನಗೆ ಸಾಮಾನ್ಯರಿಗೆ ಬರಬೇಕಾದ ವಿದ್ಯೆಗಳೆಲ್ಲಾ ಬಂದೇ ಬರುತ್ತದೆ.
ಪ್ರಶ್ನೆ: ನಿನಗೆ ಅವರು ಹೇಗೆ ಗೊತ್ತು?
ನಾನು: ಅವರು ನನ್ನ ನವೋದಯ ಸೀನಿಯರ್/ ಜೂನಿಯರ್..ಗೊತ್ತಿಲ್ಲದೇ ಏನು?
ನವೋದಯ ವಿದ್ಯಾಥರ್ಿಗಳು ಹೊರಹೋದ ನಂತರ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವುದು ನಮಗೆಲ್ಲರಿಗೂ ತಿಳಿದಿರುವುದೇ ಆಗಿದೆ. ಆದರೆ ಅವೆಲ್ಲವುಗಳಿಗೂ ಕಾರಣ ಅವರೆಲ್ಲರಲ್ಲಿ ನವೋದಯ ಬೆಳೆಸಿದ ಆತ್ಮವಿಶ್ವಾಸ,ಸ್ಪೂತರ್ಿ, ಸಾಧಿಸುವ ಛಲ, ಶ್ರಮವಹಿಸುವ ಗುಣ. ಕೆಲಸದೆಡೆಗಿನ ಶ್ರಧ್ಧೆ.
ನವೋದಯದಲ್ಲಿ ನಾವು ಕೇವಲ ಓದಿ ಹೊರಬರಲಿಲ್ಲ. ಅಲ್ಲಿ ನಮಗೆ ಜೀವನ ಕಲೆ ಸಿದ್ಧಿಸಿತ್ತು.
ಸಮಾಜದಲ್ಲಿ ಜನರೊಡನೆ ಬೆರೆತು ಬದುಕಲು ಕಲಿಯುವಲ್ಲಿ ನವೋದಯದ ಕೊಡುಗೆ ಅಪಾರ. ನಾವು ನವೋದಯದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಲಿತು ಹೊರಬಂದ ಬಾವಿಯೊಳಗಿನ ಕಪ್ಪೆಗಳಾಗಲಿಲ್ಲ ಬದಲಾಗಿ ಕಾಂಪೌಂಡಿನ ಆಚೆಗಿರುವ ಸಮಾಜದಲ್ಲಿ ಎದ್ದು ಕಾಣುವಂತೆ ಬದುಕುವುದು ಹೇಗೆಂದು ಕಾಯುತ್ತಿದ್ದೆವು.
ಪ್ರಶ್ನೆ ಮಾಡುವ ಮನೋಭಾವವನ್ನು ನಮಗೆ ಕಲಿಸಿದ್ದೇ ನವೋದಯ.. ಈಗಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನದಿಂದ, ಮಹಿತಿ ಹಕ್ಕು ಅಧಿನಿಯಮದಿಂದ ನಮಗೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ಮನೋಭಾವದ ಮಹತ್ವ ಗೊತ್ತಾಗಿದೆ. ನವೋದಯದಲ್ಲಿದ್ದಾಗ ನಾವು ಪ್ರತಿಯೊಂದನ್ನೂ ಪ್ರಶ್ನಿಸುತ್ತಿದ್ದೆವು.., ಕ್ಲಾಸಿನಲ್ಲಿ ಹಾಗು ಕ್ಲಾಸಿನಿಂದಾಚೆಗೆ.., ನಾನು ಮಾತ್ರ ಶಾಲೆಯೊಳಗಿನ ಪತ್ರಕರ್ತನಂತೆ ಕ್ಲಾಸಿನ ಹೊರಗಡೆ ಪ್ರಶ್ನೆಗಳನ್ನು ಕೇಳಿದ್ದೇ ಜಾಸ್ತಿ.
ನವೋದಯದೊಡನೆ ನಮ್ಮ ಬಂಧ ಕೇವಲ ನಾವು ಶಿಕ್ಷಣ ಪಡೆದ ಶಾಲೆಯೆಂಬುದಕ್ಕಿಂತ ಭಾವನಾತ್ಮಕವಾದ ಸಂಬಂಧವೇ ಜಾಸ್ತಿ. ಶಾಲೆ ನಮ್ಮಂತಹ ಸಾವಿರಾರು ಸಭ್ಯ ನಾಗರೀಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರೋದೇ ಸಮಾಜಕ್ಕೆ ನವೋದಯ ಕೊಡುತ್ತಿರುವಂತಹಾ ಅತಿ ದೊಡ್ದ ಕೊಡುಗೆ.
ನವೋದಯದಲ್ಲಿ ನಾವಿದ್ದಾಗ ನಿಯಮಗಳನ್ನು ಗಾಳಿಗೆ ತೂರಿದಂತಹಾ ಸಂಧರ್ಭಗಳು ಸಾಕಷ್ಟಿವೆ, ಕೆಲವೊಮ್ಮೆ ಶಿಕ್ಷೆ ಅನುಭವಿಸಿದ್ದೂ ಇದೆ, ಅವೆಲ್ಲದರಿಂದ ನಾವು ಕಲಿತಿದ್ದು ಸಾಕಷ್ಟಿದೆ. ಇವು ನಮ್ಮ ಮೇಲೆ ಒಳ್ಳೆಯ ರೀತಿಯ್ರ ಪ್ರಭಾವವನ್ನೂ ಬೀರಿದೆ.
ಇನ್ನು ನಾವು ನವೋದಯದಲ್ಲಿದ್ದಾಗ ಅಲ್ಪ ಸ್ವಲ್ಪ ಕಷ್ಟಗಳನ್ನು ಅನಾನುಕೂಲಗಳನ್ನು ಅನುಭವಿಸಿದ್ದೂ ಇದೆ, ಆದರೆ ಅದು ನಮ್ಮನ್ನು ಕಷ್ಟಸಹಿಷ್ಣುಗಳನ್ನಾಗಿ ರೂಪಿಸಿದೆ, ಇರುವ ಭಾಗ್ಯವ ನೆನೆದು ಬದುಕುವ ಹುಮ್ಮಸ್ಸನ್ನು ಹುಟ್ಟಿಸಿದೆ.
ಬರೆಯುತ್ತಾ ಹೋದರೆ ನವೋದಯದ ಅನುಭವಗಳು ಸಾಕಷ್ಟಿವೆ ಅವುಗಳಲ್ಲಿ ಹಲವು ಸಿಹಿ, ಕೆಲವು ಕಹಿ. ಕೆಲವೊಮದು ಇಲ್ಲಿದೆ.
ಎಂಪಿ ಹಾಲಲ್ಲಿ ಇದ್ದಿದ್ದು ಅಲ್ಲೇ ಮಿನಿ ಕ್ರಿಕೆಟ್ ಆಡಿದ್ದು ಸಿಹಿ ನೆನಪು.,ಗಾಜೊಡೆದು ಪೆಟ್ಟು ತಿಂದಿದ್ದು ಚುರು ಚುರು ನೆನಪು., ಮಳೆಯಲ್ಲಿ ಫುಟ್ಬಾಲ್ ಆಡಿದ್ದು, ಜ್ವರ ಬಂದು ಮಲಗಿದ್ದು., ಕಾಲಿಗೆ ಗಾಯ ಮಾಡಿಕೊಂಡಿದ್ದು., ಮಾತ್ರೆ ರಿಯಾಕ್ಷನ್ ಆಗಿದ್ದು ಮುಖ ಮೂತಿ ಊದಿಸಿಕೊಂಡು ಮನೆಗೆ ಹೋಗಿದ್ದು., 10ನೇ ತರಗತಿ ಪರೀಕ್ಷೆಗೆಂದು ಓದೋಕೆ ಅಂತಾ ಮಾಡಿಕೊಳ್ಳುತ್ತಿದ್ದ ತಯಾರಿ., ತಯಾರಿಯಲ್ಲೇ ತುಂಬಾ ಸಮಯ ಕಳೀತಾ ಇದ್ದಿದ್ದು., ಸತ್ತ ನಾಯಿಯನ್ನು ಪ್ಲಾಟ್ 2 ರಲ್ಲಿ ಹುಗಿದಿದ್ದು., ಪ್ರತೀ ಭಾನುವಾರ ನಾವು ಮಾಡುತ್ತಿದ್ದ ಕ್ಲೀನಿಂಗ್., ಕ್ಲೀನಿಂಗ್ ಸಮಯದಲ್ಲಿ ಸುಡುತ್ತಿದ್ದ ಪ್ಲಾಸ್ಟಿಕ್ಕನ್ನು ಗೆಳೆಯ ಮೊಹರೆ ನನ್ನ ಮೇಲೆ ಎಸೆದಿದ್ದು.,
ರಜೆಯ ಮುಂಚೆ ನಗಿಸುತ್ತಿದ್ದ ಪ್ರಸನ್ನಣ್ಣ ರಜೆ ಮುಗಿಸಿ ಬರುವಷ್ಟರಲ್ಲಿ ಮರೆಯಾಗಿದ್ದು.., ಹೀಗೆ ನೆನಪುಗಳು ಸಾವಿರ.., ನೆನಪುಗಳ ಖಜಾನೆಯನ್ನು ಸಂಧರ್ಭ ಸಿಕ್ಕಿದಾಗ ನಿಮ್ಮ ಮುಂದೆ ತೆರೆದಿಡುತ್ತೇನೆ.,
ನವೋದಯದಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಒಂದು ಸೂಚನೆ.., ನಾನು ಇಲ್ಲಿ ಬರೆದಂತಹಾ ನಿಯಮಗಳನ್ನು ಮುರಿದ ಕಥೆಗಳನ್ನು ಕೇವಲ ಮನೋರಂಜನೆಗಾಗಿ ಮಾತ್ರ ಓದುವುದು ಅವುಗಳನ್ನು ತಾವೂ ಮಾಡುವಂತಹ ಕೆಲಸಕ್ಕೆ ಕೈ ಹಾಕಲೇಬಾರದು.
Comments
Post a Comment