ಅನುಮಾನಾಸ್ಪದ ವ್ಯಕ್ತಿ
ಅನುಮಾನಾಸ್ಪದ ವ್ಯಕ್ತಿ ಎನ್ನುವ ಶೀರ್ಷಿಕೆ ಎಷ್ಟು ಸರಿ ಎನ್ನುವುದು ನನ್ಗೆ ಅಷ್ಟು ಸರಿಯಾಗಿ ಗೊತ್ತಿಲ್ಲ. ಆದರೂ ಅದೇ ಹೆಸರು ಸೂಕ್ತ ಅನ್ನಿಸುತ್ತಿದೆ. ನಾನು ಬೆಂಗಳೂರಿಗೆ ಹೋಗಬೇಕಾಗಿ ಬಂದಾಗ ಗೆಳೆಯ ಸಂತೋಷನ ಜೊತೆಗೆ ರೈಲಿನಲ್ಲಿ ಹೋಗೋದು ಅಂತಾ ತೀರ್ಮಾನ ಮಾಡಿದೆವು. ರೈಲು ಟಿಕೆಟ್ ತೆಗೆದುಕೊಂಡು ರೈಲು ಹತ್ತಿದಾಗ ನಮ್ಮ ಬಳಿ ಕುಳಿತ ವ್ಯಕ್ತಿಯೊಬ್ಬನ ಪರಿಚಯವಾಯಿತು. ವ್ಯಕ್ತಿಯ ವಿಶೇಷ ಶಕ್ತಿಗಳು, ಅವನ ಅನಿಸಿಕೆಗಳು ಹಾಗು ಅವನ ಬುದ್ದಿವನ್ತಿಕೆಗಳು ಇವುಗಳ ವಿಶ್ಲೇಷಣೆಯ ಸಾರವೇ ಈ ಕತೆ. ಮೊದಲಿಗೆ ಆತ ಸುತ್ತಮುತ್ತಲು ಇರುವ ಮನುಷ್ಯರ ಪರಿಚಯ ಮಾಡಿಕೊಂಡ, ನಂತರ ಅವರವರ ಉದ್ಯೋಗಗಳ ಬಗ್ಗೆ ತಿಳಿದುಕೊಂಡು, ಅವರಿಗೆ ಅವರವರ ಕೆಲಸಗಳನ್ನು ದಯವಿಟ್ಟು ಸರಿಯಾಗಿ ನಿಭಾಯಿಸುವಂತೆ ಮನವಿ ಮಾಡಿಕೊಳ್ಳುವಂತೆ ಆದೇಶ ನೀಡಿದ. ಆಗ ನನ್ನ ಕುತೂಹಲ ಕೆರಳಿ "ತಾವೇನು ಕೆಲಸ ಮಾಡುತ್ತೀರಿ" ಅಂದೆ ಅದಕ್ಕೆ ಆತ ತಾನೊಬ್ಬ ರೈತನೆಂದೂ ಹಲವಾರು ಕಾರಣಗಳಿಂದ ಯಾವುದೇ ಬೆಳೆ ಬೆಳೆಯುತ್ತಿಲ್ಲವೆಂದೂ ಹೇಳಿದ. ನಮಗೆಲ್ಲ ನ್ಯಾಯವಾಗಿ ಕೆಲಸ ಮಾಡೋಕೆ ಹೇಳೋ ನೀವು, ನಾವು ತಿನ್ನೋ ಅನ್ನಾನೆ ಬೆಳೀತಿಲ್ಲವಲ್ಲ ಅಂದೆ, ಅದಕ್ಕಾತ ತೆಲಿಸೋ ಉತ್ತರ ಕೊಟ್ಟ. ಎಲ್ಲರೂ ಹೀಗೆ "ಬೇರೆಯವರು ಎಲ್ಲರೂ ಸರಿಯಾಗಿರಬೇಕು ಅಂತಾ ಬಯಸ್ತಾರೆ ಆದರೆ ತಾವು ಎಷ್ಟು ಸರಿ ಇದೀವಿ ಅಂತಾ ಯೋಚನೆ ಮಾಡೋಕೆ ಪಾಪ ಸಮಯಾನೆ ಸಿಕ್ಕೊಲ್ಲ" ಅನ್ನಿಸಿತು. ಆತನಿಗೆ ಬಹಳ ಯೋಚನೆ ಉಂಟು ಮಾಡಿದ ವಿಷಯವೆ...