ಅನುಮಾನಾಸ್ಪದ ವ್ಯಕ್ತಿ
ಅನುಮಾನಾಸ್ಪದ ವ್ಯಕ್ತಿ ಎನ್ನುವ ಶೀರ್ಷಿಕೆ ಎಷ್ಟು ಸರಿ ಎನ್ನುವುದು ನನ್ಗೆ ಅಷ್ಟು ಸರಿಯಾಗಿ ಗೊತ್ತಿಲ್ಲ. ಆದರೂ ಅದೇ ಹೆಸರು ಸೂಕ್ತ ಅನ್ನಿಸುತ್ತಿದೆ.
ನಾನು ಬೆಂಗಳೂರಿಗೆ ಹೋಗಬೇಕಾಗಿ ಬಂದಾಗ ಗೆಳೆಯ ಸಂತೋಷನ ಜೊತೆಗೆ ರೈಲಿನಲ್ಲಿ ಹೋಗೋದು ಅಂತಾ ತೀರ್ಮಾನ ಮಾಡಿದೆವು. ರೈಲು ಟಿಕೆಟ್ ತೆಗೆದುಕೊಂಡು ರೈಲು ಹತ್ತಿದಾಗ ನಮ್ಮ ಬಳಿ ಕುಳಿತ ವ್ಯಕ್ತಿಯೊಬ್ಬನ ಪರಿಚಯವಾಯಿತು. ವ್ಯಕ್ತಿಯ ವಿಶೇಷ ಶಕ್ತಿಗಳು, ಅವನ ಅನಿಸಿಕೆಗಳು ಹಾಗು ಅವನ ಬುದ್ದಿವನ್ತಿಕೆಗಳು ಇವುಗಳ ವಿಶ್ಲೇಷಣೆಯ ಸಾರವೇ ಈ ಕತೆ. ಮೊದಲಿಗೆ ಆತ ಸುತ್ತಮುತ್ತಲು ಇರುವ ಮನುಷ್ಯರ ಪರಿಚಯ ಮಾಡಿಕೊಂಡ, ನಂತರ ಅವರವರ ಉದ್ಯೋಗಗಳ ಬಗ್ಗೆ ತಿಳಿದುಕೊಂಡು, ಅವರಿಗೆ ಅವರವರ ಕೆಲಸಗಳನ್ನು ದಯವಿಟ್ಟು ಸರಿಯಾಗಿ ನಿಭಾಯಿಸುವಂತೆ ಮನವಿ ಮಾಡಿಕೊಳ್ಳುವಂತೆ ಆದೇಶ ನೀಡಿದ. ಆಗ ನನ್ನ ಕುತೂಹಲ ಕೆರಳಿ "ತಾವೇನು ಕೆಲಸ ಮಾಡುತ್ತೀರಿ" ಅಂದೆ ಅದಕ್ಕೆ ಆತ ತಾನೊಬ್ಬ ರೈತನೆಂದೂ ಹಲವಾರು ಕಾರಣಗಳಿಂದ ಯಾವುದೇ ಬೆಳೆ ಬೆಳೆಯುತ್ತಿಲ್ಲವೆಂದೂ ಹೇಳಿದ. ನಮಗೆಲ್ಲ ನ್ಯಾಯವಾಗಿ ಕೆಲಸ ಮಾಡೋಕೆ ಹೇಳೋ ನೀವು, ನಾವು ತಿನ್ನೋ ಅನ್ನಾನೆ ಬೆಳೀತಿಲ್ಲವಲ್ಲ ಅಂದೆ, ಅದಕ್ಕಾತ ತೆಲಿಸೋ ಉತ್ತರ ಕೊಟ್ಟ. ಎಲ್ಲರೂ ಹೀಗೆ "ಬೇರೆಯವರು ಎಲ್ಲರೂ ಸರಿಯಾಗಿರಬೇಕು ಅಂತಾ ಬಯಸ್ತಾರೆ ಆದರೆ ತಾವು ಎಷ್ಟು ಸರಿ ಇದೀವಿ ಅಂತಾ ಯೋಚನೆ ಮಾಡೋಕೆ ಪಾಪ ಸಮಯಾನೆ ಸಿಕ್ಕೊಲ್ಲ" ಅನ್ನಿಸಿತು. ಆತನಿಗೆ ಬಹಳ ಯೋಚನೆ ಉಂಟು ಮಾಡಿದ ವಿಷಯವೆಂದರೆ ರೈಲು ಎಷ್ಟೊತ್ತಿಗೆ ಬೆಂಗಳೂರು ಸೇರುತ್ತೆ ಎಂಬುದಾಗಿತ್ತು. ಎಲ್ಲರಲ್ಲೂ ಬಹಳ ಸಾರಿ ಅದೇ ಪ್ರಶ್ನೆ ಕೇಳಿದ, ಕೆಲವರು ಸಂಜೆ ಎಂಟು ಘಂಟೆಗೆ ಸೇರಬಹುದು ಅಂದರು, ಕೆಲವರು ಗೊತ್ತಿಲ್ಲ ಅಂದರು. ಸಮಯ ತಿಳಿಸಿದ ಎಲ್ಲರಿಗೂ ಹಲವು ಬಾರಿ ಅದೇ ಪ್ರಶ್ನೆ ಕೇಳಿ ಸಮಯದ ಬಗ್ಗೆ ಬಹಳ ಆತುರ ಇರುವವನಂತೆ ಕಂಡುಬಂದ. ಆದರೆ ಆಮೇಲೆ ಅವನ ಜೊತೆ ಚರ್ಚಿಸಿದ ನಂತರ ನನ್ಗೆ ತಿಳಿದ ವಿಷಯವೇನೆಂದರೆ ಆತನಿಗೆ ಬೆಂಗಳೂರಿಗೆ ತಲುಪಿ ಮಾಡಬೇಕಾದ ವಿಶೇಷ ಕೆಲಸಗಳು ಏನೂ ಇರಲಿಲ್ಲ, ವಿಷಯ ಹೀಗಿದ್ದರೂ ಆತ ರೈಲು ತಲುಪುವ ಸಮಯದ ಬಗ್ಗೆ ಏಕೆ ಅಷ್ಟೊಂದು ತಲೆ ಕೆಡಿಸಿಕೊಂಡಿದ್ದ ಅಂತಾ ತಿಳಿಯಲಿಲ್ಲ.
ಮಂಡಕ್ಕಿ ಮಾರುವ ಮನುಷ್ಯನ ಜೊತೆಗೆ ಆತ ವಾದಕ್ಕಿಳಿದ, ಹಾಗೂ ಐದು ರುಪಾಯಿಗೆ ಮಾರಬಹುದಾದ ಮಂಡಕ್ಕಿಗೆ ಹತ್ತು ರುಪಾಯಿ ಯಾಕೆ ಎಂದು ಚರ್ಚಿಸತೊಡಗಿದ. ಹೀಗೆ ಚಹಾ ಮಾರೋರು, ಬಿಸ್ಕೆಟ್ ಮಾರೋರು ಹಾಗೂ ನೀರು ಮಾರೋರ ಜೊತೆಗೆ ಜಗಳ ಕಾಯುತ್ತಿದ್ದ. ನಾವು ಯಾರ ಪರಾನೂ ಮಾತಾಡದೆ ಸುಮ್ಮನೆ ಇದ್ದೆವು.
ಕೆಲವೊಂದು ರೈಲು ನಿಲ್ದಾಣದ ಬಳಿ ರೈಲು ಇತರ ರೈಲುಗಳಿಗೆ ದಾರಿ ನೀಡಲು ನಿಂತಾಗ ಆತ "ಛೆ, ಇಲ್ಲಿ ರೈಲು ನಿಲ್ಲದೆ ಇದ್ದರೆ ಇಷ್ಟೊತ್ತಿಗೆ, ಮುಂದಿನ ನಿಲ್ದಾಣದಲ್ಲಿ ಇರುತ್ತಿದ್ದೆವು "ಎಂದೋ ಅಥವಾ "ಅರಸೀಕೆರೆಯಲ್ಲಿ ಇರುತ್ತಿದ್ದೆವು" ಎಂದೋ ಗೊಣಗುತ್ತಿದ್ದ. ಇವನು ಸುಮ್ಮನೆ ಗೊಣಗುತ್ತಿದ್ದಾನೆ ಇವನನ್ನು ತಮಾಷೆ ಮಾಡಬೇಕು ಅನ್ನಿಸಿತು. ನಾನೂ ನನ್ನ ಗೆಳೆಯ ನಮ್ಮ ಟಿಕೆಟ್ಟು ತೆಗೆದುಕೊಂಡು ಅದರ ಮೇಲೆ ಇರುವ ಕೆಲವು ಆಂಗ್ಲ ಅಕ್ಷರಗಳ ಬಗ್ಗೆ ಮಾತನಾಡತೊಡಗಿದೆವು, ಆತ ಕುತೂಹಲಗೊಂಡು ನಮ್ಮ ಮಾತನ್ನೇ ಕೇಳ ತೊಡಗಿದ. ಆ ಆಂಗ್ಲ ಅಕ್ಷರಗಳು ಕೇವಲ ಟಿಕೆಟ್ಟಿನ ಸೀರಿಯಲ್ ನಂಬರ್ ಆಗಿದ್ದರೂ ನಾನು ಅದು "ಆ ರೈಲು ಮಾಡುವ ಸದ್ದು" ಎಂದು ಗೆಳೆಯನಿಗೆ ಹೇಳಿದೆ. ಆತನ ಕಿವಿಗಳು ಚುರುಕುಗೊಂಡಿತು. ನಮ್ಮ ಟಿಕೆಟ್ಟಿನಲ್ಲಿ ಇದ್ದ ಅಕ್ಷರಗಳು dabbak dabak ಎಂದಿತ್ತು, ಅದೇ ರೀತಿ ನಮ್ಮ ರೈಲಿನ ಬೋಗಿ ಸದ್ದು ಮಾಡುತ್ತಿದೆ ಎಂದೆ. ನನ್ನ ಗೆಳೆಯ ನಗುತ್ತ "ಹೌದು, ಹೌದು" ಎಂದ. ಕೂಡಲೇ ತನ್ನ ಟಿಕೆಟ್ಟು ತೆಗೆದು ಅದರಲ್ಲಿದ್ದ ಅಕ್ಷರಗಳನ್ನು ನಮಗೆ ತೋರಿಸಿದ ಅದರಲ್ಲಿ abdak \dabka ಎಂದಿತ್ತು. "ಒಂದೇ ಬೋಗಿ ಎರಡು ರೀತಿ ಹೇಗೆ ಸದ್ದು ಮಾಡುತ್ತೆ?" ಅಂತ ಆತ ಕೇಳಿದಾಗ ನಮ್ಮ ಬಳಿ ಉತ್ತರ ಇರಲಿಲ್ಲ.
ಟಿ ಸಿ ಟಿಕೆಟ್ಟು ಗಳ ಪರಿಶೀಲನೆಗೆ ಬಂದಾಗ ಅವರ ಬಳಿಯೂ ಆತ ರೈಲು ತಲುಪುವ ಸಮಯದ ಬಗ್ಗೆ ಮಾತನಾಡಿದ ಹಾಗು ಸಮರ್ಪಕ ಉತ್ತರ ದೊರೆಯದೆ ನಿರಾಶನಾದ. ಹೀಗಿರುವಾಗ ಆತ ಬಹಳ ಜತನದಿಂದ ಇರಿಸಿಕೊಂಡ ಚೀಲದ ಬಗ್ಗೆ ನಮಗೆ ಅನುಮಾನ ಬಂತು. ಆತ ಎಲ್ಲೇ ಹೋದರೂ ಆ ಕೈ ಚೀಲವನ್ನು ಜೊತೆಗೆ ಒಯ್ಯುತ್ತಿದ್ದ ಹಾಗು ಅದನ್ನು ಬಹಳ ಬಿಗಿಯಾಗಿ ಹಿಡಿದುಕೊಂಡಿದ್ದ. ಅದೇನೆಂದು ಕೇಳಿದಾಗ ಅಂತ ವಿಶೇಷವಾದ್ದು ಏನೂ ಇಲ್ಲ ಬರೀ ಬಟ್ಟೆ ಎಂದಾಗ ಅವನ ಮುಖ ಬಿಳುಚಿಕೊಂಡಿತ್ತು . ನಾನು ನನ್ನ ಗೆಳೆಯ ಅದರಲ್ಲಿರಬಹುದಾದ ವಸ್ತುಗಳ ಬಗ್ಗೆ ಅಂದಾಜು ಮಾಡತೊಡಗಿದೆವು. ಆ ಪ್ರಶ್ನೆ ಕೇಳಿದ ಮೇಲೆ ಆತ ನಮ್ಮೊಡನೆ ಮಾತನಾಡೋದು ಕಮ್ಮಿ ಮಾಡಿದ ಹಾಗೂ ವಿಚಿತ್ರವಾಗಿ ವರ್ತಿಸುತ್ತಿರುವವನಂತೆ ಕಾಣತೊಡಗಿದ.
ಮುಂದಿನ ನಿಲ್ದಾಣದಲ್ಲಿ ಆತ ಕೆಳಗಿಳಿದು ಪಕ್ಕದ ಬೋಗಿ ಒಂದನ್ನ ಸೇರಿಕೊಂಡ ಹಾಗು ಬಹಳ ಸಮಯದ ನಂತರ ತುಂಬಾ ತಡವಾಗಿ ಬೆಂಗಳೂರು ಸೇರಿದ ರೈಲಿನಿಂದ ಲಗುಬಗೆಯಲ್ಲಿ ಇಳಿದು ಆತ ಜನಜಂಗುಳಿಯಲ್ಲಿ ಸೇರಿ ಹೋದ.

this script is very much difficult to read. i can't getting it. when we meet u plz explain it.
ReplyDelete