haage annisida kathe

ಹಾಗೆ ಸುಮ್ಮನೆ ಏನಾದರು ಗೀಚೋಣ ಅಂದಾಗ, ನಾನು ಸುಮ್ಮನೆ ಕುಳಿತಿದ್ದಾಗ ಹೀಗೊಂದು ಕಥೆ ಬರೆಯಬಹುದು ಅಂದುಕೊಂಡಿದ್ದೆಲ್ಲ ಅಕ್ಷರ ರೂಪಕ್ಕಿಳಿಸಬೇಕು ಎನ್ನಿಸುತ್ತದೆ ಅಂಥಹ ಮೊದಲ ಪ್ರಯತ್ನವೇ ಈ ಕಥೆ . ಈ ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು,...............,,,ನಿಮಗೆ ಗೊತ್ತಿದೆ.

                                                              ಪಿಕ್ ಪಾಕೆಟ್


ಪ್ರತೀ ಸಾರಿ ಊರಿಂದ ಬರುವಾಗಲೂ ಒಂದೇ ಚಿಂತೆ , ದುಡ್ಡು ಹೇಗೆ ಉಳಿಸೋದು ? ಖರ್ಚು ಹೇಗೆ ಕಮ್ಮಿ ಮಾಡೋದು ಅಂತೆಲ್ಲ . ಅಪ್ಪ ಹೇಳುತ್ತಿದ್ದ ಮಾತುಗಳು ಆಗಾಗ ಕಿವಿಯಲ್ಲಿ ರಿನ್ಗಿಣಿಸಿದಂತೆ ಅನ್ನಿಸುತಿತ್ತು . ಆತ ಯಾವಾಗಲು ಹೇಳುತ್ತಾನೆ "ಉಳಿಸಿದ ಹಣವೇ ಗಳಿಸಿದ ಹಣ "ಅಂಥಾ, ಹೌದು ಹೇಳೋದು ಸುಲಭ ಆಚರಣೆಗೆ ತರೋದು ಭಾಳ ಕಷ್ಟ ಅಲ್ಲವೇ? ತಿಂಗಳ ಸಂಬಳ ಹತ್ತನೇ ತಾರೀಕು ಹೊತ್ತಿಗೆ ನೂರರ ಲೆಕ್ಕದಲ್ಲಿದ್ದಾಗ ಅಂದುಕೊಳ್ಳೋದು, "ಮುಂದಿನ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಉಳಿಸಬೇಕು , ನನ್ನ ಸಾಮರ್ಥ್ಯದ ಬಗ್ಗೆ ನನಗೇ ಆಶ್ಚರ್ಯವಾಗಬೇಕು" ಹೀಗೆಲ್ಲ..ಅಂದುಕೊಳ್ಳುತ್ತಿದ್ದಾಗಲೇ  ಸಾರಿಗೆ ಬಸ್ಸು ಜೋರಾಗಿ ಉಸಿರು ಬಿಡುತ್ತಾ ಹೊರಟೆ ಬಿಡ್ತು.
ಭಾರತೀ ಬೀದಿ ದಾಟುವಷ್ಟರಲ್ಲಿ ನಾಲ್ಕು ಜನರಿದ್ದ ಬಸ್ಸು ನಲವತ್ತಾಯ್ತು , ಊರು ದಾಟುವಾಗ ಅದರ ಎರಡರಷ್ಟಾಗಿ ಶಿವಮೊಗ್ಗ ತಲುಪುವುದು ಅನುಮಾನವಾಗಿ ಕಾಣಿಸ ಹತ್ತಿತು.
ರಶ್ ನಡುವೆ ಯಾವಾಗ ಟಿಕೆಟ್ ತಗೊಂಡೆ ಯಾವ ಜೋಬಲ್ಲಿ ಪರ್ಸ್ ಇಟ್ಟುಕೊಂಡೆ ಎಂಬುದೂ ತಿಳಿಯಲಿಲ್ಲ .
ಶಿವಮೊಗ್ಗಕ್ಕೆ ಇನ್ನೇನು ಎರಡೇ ಕಿಲೋಮೀಟರು ಇದೆ ಎನ್ನುವಾಗ ಜನಸಂದಣಿ ಕಮ್ಮಿಯಾಗಿತ್ತು., ಟೀವಿಯಲ್ಲಿ ಬರುವ ನಾಟಕೀಯ ಹಾಗು ಹಾಸ್ಯಾಸ್ಪದ ಸಂಭಾಷಣೆಯ ವಿಷಯಗಳಿಂದ ನನ್ನ ಮನಸ್ಸು ಸುತ್ತಮುತ್ತಲಿಗೆ ತಿರುಗಿತು. ಯಾರಾದರು ಪರಿಚಯಸ್ಥರು ಇದ್ದಾರ ನೋಡಿದೆ. ಕಾಲ ಬುಡದಲ್ಲಿ ಕಪ್ಪುಬಣ್ಣದ ಪರ್ಸ್ ಕಂಡಿದ್ದೆ ತಡ ನನಗಾದ ಸಂತೋಷವನ್ನು ಹೇಳಲು ಸಾದ್ಯವೇ ಇಲ್ಲ. ಎಷ್ಟು ಒಳ್ಳೆಯತನದ ಬಗ್ಗೆ ಪಾಠ ಮಾಡಿದರೂ ಸಹ, ವಿಷಯ ನಮ್ಮ ಕಾಲ ಬುಡಕ್ಕೆ ಬಂದಾಗಲೇ ನಮ್ಮ ನಿಜಬಣ್ಣ ಬಯಲಾಗೋದು ಅನ್ಥನ್ನಿಸಿದರೂ, ಪರ್ಸ್ನಲ್ಲಿ ಇರಬಹುದಾದ ಮೊತ್ತದ ಕಲ್ಪನೆ ಎಲ್ಲ ವಿಚಾರಗಳಿಗೂ ಬ್ರೇಕ್ ಹಾಕಿತು. "ದೇವರೇ ಆದಷ್ಟು ಜಾಸ್ತಿ ದುಡ್ಡು ಇರೋಹಾಗೆ ಮಾಡಪ್ಪ" ಅಂದುಕೊಳ್ಳುತ್ತ ಕಾಲಲ್ಲಿ ಪರ್ಸ್ ಎಳೆದುಕೊಂಡು, ಯಾರಿಗೂ ತಿಳಿಯದ ಹಾಗೆ ಕೈಗೆ ತೆಗೆದುಕೊಂಡೆ. ಅಗಲಿಸಿದ್ದ ಬಾಯಿ ಮುಚ್ಚಿಕೊಳ್ಳಬೇಕಾಯ್ತು.

ಆ ಪರ್ಸ್ ನನ್ನದೇ ಆಗಿತ್ತು, ಈ ತಿಂಗಳು ಉಳಿಸಿದ ಹಣ ಯಾರದೋ ಪಾಲಾಗಿತ್ತು, ನನ್ನ ಪುಣ್ಯಕ್ಕೆ ಬ್ಯಾಂಕ್ ಕಾರ್ಡ್, ಡಿಎಲ್ , ಹಾಗೆ ಉಳಿದಿತ್ತು, ಪರ್ಸ್ ನಲ್ಲಿ ಇಟ್ಟ ನನ್ನ ಮಡದಿಯಾಗುವವಳ ಫೋಟೋ ನನ್ನನ್ನು ನೋಡಿ ಗೊಳ್ಳನೆ ನಗುತ್ತಿದ್ದಾಳೆ ಅಂತನ್ನಿಸಿತು.



ಮುಗೀತು. ಮುಂದಿನ ಕಥೆ ನನ್ಗೆ ಬರೀಬೇಕು ಅನ್ನಿಸಿದಾಗ.

Comments

  1. chennaagide. saNNa kaTheyaadaroo ondu vishaala kaThe anubhava mattu cchaye bittide.
    me:liDi (andre,.. Keep it up).

    ReplyDelete
  2. ದೀಪಕ್ ಡೊಂಗ್ರೆಯವರೇ ಸಣ್ಣಕಥೆಯಾದ್ರು ರಸವತ್ತಾಗಿ ಹೇಳಿದ್ದೀರಿ, ಬ್ಲಾಗ್ ನ ಮೊದಲ ಪೊಸ್ಟ್ ಇದು ಅಲ್ಲವೆ? ಇನ್ನು ಹೆಚ್ಚು ಹೆಚ್ಚು ಬರೆಯುವ ಉತ್ಸಾಹ ನಿಮ್ಮದಾಗಲಿ.

    ಶುಭ ಹಾರೈಕೆಗಳು
    ನಾಗರಾಜ್ ಎಮ್ ಎಮ್
    http://mmnagaraj.wordpress.com

    ReplyDelete

Post a Comment

Popular posts from this blog

BASIC COMPUTER APPLICATIONS OLD SYLLABUS 15CP16P

15CP15P MODERN BUSINESS PRACTICES OLD SYLLABUS

COMPREHENSION PASSAGE FOR PRACTICE