NOTHING I HAVE EVER KNOWN.
ನನಗೆ ತಿಳಿದಿರಲಿಲ್ಲ
ನನಗೆ ತಿಳಿದಿರಲಿಲ್ಲ
ಗಾಳಿಗೆ ಸಿಲುಕಿದ ತರಗೆಲೆಯಂತೆ
ನಾನಿರುವೆ ಈಗ,
ಬೀಸುವ ಪರಿಯೇನೋ
ಸಾಗುವ ದಿಕ್ಕೆಲ್ಲೋ.
ನಾನೆಂದೂ ಹೋಗಲಾರದ
ಜಾಗಕೆ ಬಂದು ತಲುಪಿದೆ,
ಸುರುಳಿ ಸುತ್ತುತಿದೆ ಚಕ್ರ;
ಒಂದೆಡೆ ನೀನು
ಮತ್ತೊಂದೆಡೆ ನಾನು,
ಹರಿಯುತಿದೆ ಮನವೆಲ್ಲ ನಿನ್ನೆಡೆಗೆ.
ಹೇಳಲಾಗದ ಹಾಡು ಪದಗಳಲಿ
ಹೇಳಲಾಗುವುದು ಇಷ್ಟೇ,
ಬದಲಿಸಿದೆ ನನ್ನ ನೀನು.
ನನಗೆಂದೂ ಇವೆಲ್ಲ ತಿಳಿದಿರಲಿಲ್ಲ
ಹೀಗೆಲ್ಲ ಅನಿಸುವುದು ಎಂದು
ನನಗೆಂದೂ ಹೀಗೆಲ್ಲ ಕಂಡಿರಲಿಲ್ಲ
ನಿನಗಾಗಿ ನಾನು ಬಂದಿರುವೆನೆಂದು.
ನಾ ಸೋತಿರುವೆ ಪದಗಳಲಿ
ಕೇಳಲಾಗುವುದು ಇಷ್ಟೇ,
ನಿನ್ನ ಸ್ವರದ ಸಾಂತ್ವನ.
ನೀ ಬಂದೆ ಜೊತೆಯಾಗಿ ಇಂದು
ನನ್ನ ಮನಸಿಗೆ ಬಲ ಇಷ್ಟೊಂದಿದೆಯೇ,
ತಿಳಿದಿರಲಿಲ್ಲ.
ಎಲ್ಲ ತಿಳಿದ ಮೇಲೂ
ಅನಿಸುತಿದೆ
ನನಗೆಂದೂ ಇವೆಲ್ಲ ತಿಳಿದಿರಲಿಲ್ಲ,
ನಿಲುಗಡೆಗೆ ಕಾಯುತಿದೆ
ಮುಗಿಯದ ತಿಳಿದುಕೊಳ್ಳುವ ತವಕ.
ನನ್ನ ಮನಸಿಗೆ ಬಲ ಬಂದಂತಿದೆ
ಅಥವಾ ಇವೆಲ್ಲವೂ ಸುಳ್ಳೆಂದನ್ತಿದೆ.
- ದೀಪಕ್ ಡೊಂಗ್ರೆ
very nice deepak...keep it up!!!!!!
ReplyDeleteDeepu...wonderful....really nice.
ReplyDeletekeep writing....Good Luck.