Posts

Showing posts from July, 2021

ಗತಕಾಲದ ಕತೆ ಹೇಳಿದ ವಿನಾಯಕ ರೇಡಿಯೋ ಸರ್ವಿಸ್

Image
     ಗತ ಕಾಲದ ಕತೆ ಹೇಳಿದ ವಿನಾಯಕ ರೇಡಿಯೋ ಸರ್ವಿಸ್      ಸಂಸ್ಕೃತಿ ಅಧ್ಯಾಯನ ಅಂದ ತಕ್ಷಣ ನಮಗೆಲ್ಲ ನಮ್ಮ ದೇಶದ ವೈವಿಧ್ಯಮಯ ಸಂಪ್ರದಾಯಗಳು, ಆಚರಣೆಗಳು ಕಣ್ಣ ಮುಂದೆ ಹಾಡು ಬರುತ್ತದೆ. ಹಬ್ಬ ಹರಿದಿನಗಳು, ವಿವಿಧ ದಿರಿಸುಗಳು, ಯಕ್ಷಗಾನ, ಕೋಲಾಟ, ಕುಚುಪುಡಿ ಭರತ ನಾಟ್ಯಗಳು 'ಸಾಂಸ್ಕೃತಿಕ' ಅನ್ನುವ ಪದದ ಜೊತೆಗೆ ತಳುಕು ಹಾಕಿಕೊಂಡು ಕಣ್ಮುಂದೆ ಕುಣಿಯುತ್ತದೆ, ಇದೆಲ್ಲವೂ ನಿಜ ಕೂಡ ಹೌದು.       ಆದರೆ ಸಂಸ್ಕೃತಿ ಎಂದರೆ ನಮ್ಮ ದಿನ ನಿತ್ಯದ ಜೀವನವು ಹೌದು ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ನಾವು ದಿನನಿತ್ಯದ ಬದುಕಿನಲ್ಲಿ ಎದುರಿಸುವ ಸಂಗತಿಗಳು, ಆಚರಣೆಗಳು , ನಮ್ಮ ಅಭಿರುಚಿ, ಆಸಕ್ತಿಗಳು, ಹವ್ಯಾಸ, ಟೈಮ್ ಪಾಸ್ ಗಳು ಇವೆಲ್ಲವೂ ಸಾಂಸ್ಕೃತಿಕ ಅಧ್ಯಯನದ ಭಾಗ ಮಾತ್ರವಲ್ಲದೆ ಸಂಸ್ಕೃತಿಯನ್ನು ವಿವರಿಸುವ ವಿಚಾರಗಳೂ ಹೌದು, ಅಧ್ಯಯನಕ್ಕೆ ವಿಷಯವೂ ಹೌದು. ಸ್ವಲ್ಪ ವಿವರಿಸಬೇಕೆಂದರೆ, ನೀವು ವಾಟ್ಸ್ ಆಪ್ ಗುಂಪುಗಳಲ್ಲಿ ಬಂದಿರುವ ಶೇರ್ ಆಗಿರುವ ಕೆಲವೊಂದು ಹಳೆಯ ನೆನಪುಗಳನ್ನು ವಿವರಿಸುವ ವಿಡಿಯೋಗಳನ್ನ ನೋಡಿರಬಹುದು. ಅಲ್ಲಿ ನೀವು ಬಾಲ್ಯದ ದಿನಗಳಲ್ಲಿ ಕಂಡಿದ್ದ ಪೆಪ್ಪರ್ಮೆಂಟಿನ ಚಿತ್ರ, ಐಸ್ ಕ್ಯಾಂಡಿಯ ರುಚಿ, ಆಟೋಟಗಳ ನೆನಪುಗಳನ್ನು ಮೆಲುಕು ಹಾಕಿರುತ್ತೀರಿ. ಸ್ವಚ್ಚಂದವಾಗಿ ಸುತ್ತಾಡುತ್ತ ಮರಗಿಡಗಳಲ್ಲಿ ಹೆಕ್ಕಿ, ಕಿತ್ತು ತಿಂದ ಹಣ್ಣು ಕಾಯಿಗಳನ್ನ ನೆನಪಿಸಿಕೊಂಡಿರುತ್ತೀರಿ. ಅದೇ ರೀತಿ, "ಈಗ ಚಣ್ಣೆ ಮಣೆ ಆಟಾನೇ ಇಲ್ಲ,