Posts

Showing posts from February, 2011

ಅನುಮಾನಾಸ್ಪದ ವ್ಯಕ್ತಿ

ಅನುಮಾನಾಸ್ಪದ ವ್ಯಕ್ತಿ  ಎನ್ನುವ ಶೀರ್ಷಿಕೆ ಎಷ್ಟು ಸರಿ ಎನ್ನುವುದು ನನ್ಗೆ ಅಷ್ಟು ಸರಿಯಾಗಿ ಗೊತ್ತಿಲ್ಲ. ಆದರೂ ಅದೇ ಹೆಸರು ಸೂಕ್ತ ಅನ್ನಿಸುತ್ತಿದೆ. ನಾನು ಬೆಂಗಳೂರಿಗೆ ಹೋಗಬೇಕಾಗಿ ಬಂದಾಗ ಗೆಳೆಯ ಸಂತೋಷನ ಜೊತೆಗೆ ರೈಲಿನಲ್ಲಿ ಹೋಗೋದು ಅಂತಾ ತೀರ್ಮಾನ ಮಾಡಿದೆವು. ರೈಲು ಟಿಕೆಟ್ ತೆಗೆದುಕೊಂಡು ರೈಲು ಹತ್ತಿದಾಗ ನಮ್ಮ ಬಳಿ ಕುಳಿತ ವ್ಯಕ್ತಿಯೊಬ್ಬನ ಪರಿಚಯವಾಯಿತು. ವ್ಯಕ್ತಿಯ ವಿಶೇಷ ಶಕ್ತಿಗಳು, ಅವನ ಅನಿಸಿಕೆಗಳು ಹಾಗು ಅವನ ಬುದ್ದಿವನ್ತಿಕೆಗಳು ಇವುಗಳ ವಿಶ್ಲೇಷಣೆಯ ಸಾರವೇ ಈ ಕತೆ. ಮೊದಲಿಗೆ ಆತ ಸುತ್ತಮುತ್ತಲು ಇರುವ ಮನುಷ್ಯರ ಪರಿಚಯ ಮಾಡಿಕೊಂಡ, ನಂತರ ಅವರವರ ಉದ್ಯೋಗಗಳ ಬಗ್ಗೆ ತಿಳಿದುಕೊಂಡು, ಅವರಿಗೆ ಅವರವರ ಕೆಲಸಗಳನ್ನು ದಯವಿಟ್ಟು ಸರಿಯಾಗಿ ನಿಭಾಯಿಸುವಂತೆ ಮನವಿ ಮಾಡಿಕೊಳ್ಳುವಂತೆ ಆದೇಶ ನೀಡಿದ. ಆಗ ನನ್ನ ಕುತೂಹಲ ಕೆರಳಿ "ತಾವೇನು ಕೆಲಸ ಮಾಡುತ್ತೀರಿ" ಅಂದೆ ಅದಕ್ಕೆ ಆತ ತಾನೊಬ್ಬ ರೈತನೆಂದೂ ಹಲವಾರು ಕಾರಣಗಳಿಂದ ಯಾವುದೇ ಬೆಳೆ ಬೆಳೆಯುತ್ತಿಲ್ಲವೆಂದೂ ಹೇಳಿದ. ನಮಗೆಲ್ಲ ನ್ಯಾಯವಾಗಿ ಕೆಲಸ ಮಾಡೋಕೆ ಹೇಳೋ ನೀವು, ನಾವು ತಿನ್ನೋ ಅನ್ನಾನೆ ಬೆಳೀತಿಲ್ಲವಲ್ಲ ಅಂದೆ, ಅದಕ್ಕಾತ ತೆಲಿಸೋ ಉತ್ತರ ಕೊಟ್ಟ. ಎಲ್ಲರೂ ಹೀಗೆ "ಬೇರೆಯವರು ಎಲ್ಲರೂ ಸರಿಯಾಗಿರಬೇಕು ಅಂತಾ ಬಯಸ್ತಾರೆ ಆದರೆ ತಾವು ಎಷ್ಟು ಸರಿ ಇದೀವಿ ಅಂತಾ ಯೋಚನೆ ಮಾಡೋಕೆ ಪಾಪ ಸಮಯಾನೆ ಸಿಕ್ಕೊಲ್ಲ" ಅನ್ನಿಸಿತು. ಆತನಿಗೆ ಬಹಳ ಯೋಚನೆ ಉಂಟು ಮಾಡಿದ ವಿಷಯವೆ
ಪ್ರಾಣಿ ಹಿಂಸೆ ಮತ್ತು ಪ್ರಾಣಿಗಳು.

ಬೈಕ್ ಬಾಲು ಮತ್ತು ಬಲಿ.

                             ಬೈಕ್  ಬಾಲು ಮತ್ತು ಬಲಿ, ಕತೆಯ ಹೆಸರು ಓದಿದೊಡನೆ ಓದುಗರು ಇದು ಯಾವುದೋ ಬೈಕ್ ಓಡಿಸುವವನ ದುರಂತ  ಕತೆ ಎಂದು ತಿಳಿದರೆ, ಅದು ಒಂತರ  ಸರಿ. ನಮ್ಮೂರ ಬಾಲುಗೆ ಬೈಕ್ ಗಳೆಂದರೆ ಪ್ರಾಣ. ಯಾವಾಗಲೂ ವಿವಿದ ಬೈಕ್ ಗಳ ಬಗ್ಗೆಯೇ ಯೋಚಿಸುವುದು ಅವನ ಜಾಯಮಾನ. ಅವನ ರೂಮಿನ ತುಂಬೆಲ್ಲ ವಿವಿದ ಬಗೆಯ ಬೈಕ್ ಗಳ ಚಿತ್ರಗಳು. ಕಾಲೇಜು ಮುಗಿಸುತ್ತಿದ್ದಂತೆ ಬೇರೆ ಬೇರೆ ಬೈಕ್ ಗಳ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಟ, ಚಿತ್ರಗಳ ಸಂಗ್ರಹ, ಯಾವ ಯಾವ ಬೈಕ್ ಎಷ್ಟು ಮೈಲೇಜು ಕೊಡುತ್ತೆ, ಎಷ್ಟು ಸಿ ಸಿ ಎಂಜಿನ್. ಪಿಕ್ ಅಪ್ ಹೇಗಿದೆ, ಇವೆಲ್ಲ ಅವನ ಅಧ್ಯಯನದ ವಿಷಯಗಳು. ಇಂತಹ ಬೈಕ್ ಹುಚ್ಹನ ಹತ್ತಿರ ಹಳೆಯ ಬೈಕ್ ಒಂದಿತ್ತು. ಆತ ಅದನ್ನು ಓಡಿಸಿಕೊಂಡು ಹೋಗುತ್ತಿರುವಾಗ ಹಾರ್ನ್ ಹೊಡೆಯೋದೆ ಬೇಕಿರಲಿಲ್ಲ, ಅದರ ಎಂಜಿನ್ ಆರ್ಭಟಕ್ಕೆ ಜನ ರಸ್ತೆಯಿಂದ ದೂರ ಸರಿಯುತ್ತಿದ್ದರು , ನಟ್ಟುಗಳು ಸಡಿಲವಾಗಿ ಬೈಕ್ ಹಾಡಿಗೆ ಕೋರಸ್ ಹಾಡುತ್ತಿತ್ತು. ಅದರಲ್ಲಿ ಕೂರಲು ಮಿತ್ರರು ಯಾರೂ ಮುಂದೆ ಬರುತ್ತಿರಲಿಲ್ಲ, ಏಕೆಂದರೆ ಅದು ನಿಲ್ಲಬೇಕಾದಲ್ಲಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ. ಅದನ್ನು ದೂಕಿ ಸ್ಟಾರ್ಟ್ ಮಾಡಬೇಕಿತ್ತು, ಯಾಕೆಂದರೆ ಅದರ ಕಿಕ್ಕರ್ ಮುರಿದಿತ್ತು. ಆತ ಎಲ್ಲಿಗೆ ಹೋಗಿದ್ದಾನೆ ಎಂದು ಯಾರು ಬೇಕಾದರೂ ಹುಡುಕಬಹುದಿತ್ತು, ಹೇಗೆ ಎಂದರೆ ಆತನ ಬೈಕ್ ಹೋದಲ್ಲಿ ಮೀಟರ್ಗೆ ಒಂದು ಹನಿ ಕಪ್ಪು ಆಯಿಲ್ ಸುರಿದಿರುತ್ತಿತ್ತು.        

ನಸೀಮ ಬೀಡಿ ನಜೀರ್ ಸಾಬ್

                   ನಮ್ಮೂರ ನಸೀಮ ಬೀಡಿ ನಜೀರ್ ಸಾಬ್ ರ ಕತೆ ಇಂತಿದೆ. ನಜೀರ್ ಸಾಬರು ಒಳ್ಳೆಯ ವ್ಯಕ್ತಿ ಎಲ್ಲರಿಗೂ ಬೇಕಾದಂತಹ ಮನುಷ್ಯ. ಆತನಿಂದ ಕೆಲಸ ಮಾಡಿಸಿಕೊಳ್ಳದ ವ್ಯಕ್ತಿ ನಿಮಗೆ ಬಹುಷಃ ಊರಲ್ಲಿ ಯಾರೂ ಸಿಕ್ಕುವುದು ಕಷ್ಟ. ನಜೀರ್ ಸಾಬರಿಗೆ ಗೊತ್ತಿಲ್ಲದ ಕೆಲಸ ಏನು ಎಂದರೆ ಅದಕ್ಕೂ ಉತ್ತರ ಸಿಕ್ಕುವುದು ಕಷ್ಟ.                     ನಜೀರ್ ಸಾಬರದ್ದು ಸಮಯಾವಲಂಬಿ ಉದ್ಯೋಗ. ಮಳೆಗಾಲದಲ್ಲಿ ಹಪ್ಪಳ ಸಂಡಿಗೆ ಮಾರುವುದು, ರಾತ್ರಿ ಹೊತ್ತು ಗದ್ದೆಗೆ ಹೋಗಿ ಮೀನು ಕಡಿದು ತಂದು ಮಾರುವುದು, ಗದ್ದೆ ಅಂಚು ಕಡಿಯುವುದು, ಚಳಿಗಾಲದಲ್ಲಿ ಹಾಸಿಗೆ ರಿಪೇರಿ, ಗುಜರಿ ಸಂಗ್ರಹಿಸುವುದು, ತೋಟದ ಕೆಲಸದಲ್ಲಿ ಸಹಾಯ ಮಾಡೋದು, ಅಡಿಕೆ ಸುಲಿಯೋದು. ಬೇಸಿಗೆಯಲ್ಲಿ ಕಟ್ಟಿಗೆ ಕಡಿಯೋದು, ದರಗು ಗುಡಿಸೋದು, ಗೊಬ್ಬರ ಮಾಡೋದು, ಹಲಸಿನ ಹಣ್ಣಿನ ವ್ಯಾಪಾರ, ಮಾವಿನ ಹಣ್ಣನ್ನು ಎಲ್ಲರ ಮನೆಗೆ ಉಚಿತವಾಗಿ ಕೊಡೋದು, ಹೀಗೆ ಇವುಗಳು ಅವನು ಮಾಡುವ ಕೆಲವು ಕೆಲಸಗಳ ವಿವರ. ವಿವರ ನೀಡದೆ ಇದ್ದರೂ ಆತನ ಇನ್ನೊಂದು ಕೆಲಸ ಈಗಾಗಲೇ ನಿಮಗೆ ತಿಳಿದಿರಬಹುದು. ಅದೇನೆಂದರೆ ಬೀಡಿ ಎಳೆಯೋದು. ಆತನ ಬಾಯಲ್ಲಿ ಯಾವಾಗಲು ಬೀಡಿಯೊಂದು ಹೊಗೆಯಾಡುತ್ತಲೇ ಇರಬೇಕು. ಆತನ ಬಾಯಲ್ಲಿ ಬೀಡಿ ಇಲ್ಲದೆ ಇದ್ದರೆ ಅವರು ನಜೀರ್ ಸಾಬರೆಂದು ಕೆಲವರಿಗೆ ಗುರುತೇ ಸಿಕ್ಕುವುದಿಲ್ಲ. ಇದನ್ನು ನಿಮಗೆ ಯಾಕೆ ಹೇಳುತ್ತಿದ್ದೀನಿ ಅಂದ್ರೆ ನಜೀರ್ ಸಾಬರನ್ನು ಅಜ್ಞಾತ ಸ್ಥಳದಲ್ಲಿ ಹುಡುಕುವ ಉಪಾಯವೂ ಇದೇ ಆಗಿದೆ.

ತಪೋ ಫಲ

ತಪೋ ಫಲ ಎಂದಾಕ್ಷಣ ಇದು ಯಾವುದೋ ಪುರಾಣ ಕಾಲದ ಕತೆ ಅಂದುಕೊಳ್ಳಬೇಡಿ. ಇದು ಈ ಶತಮಾನದ ಕಥೆ.                        ನನ್ಗೆ ಯಾವಾಗಲೂ ಒಬ್ಬರು ಆಧ್ಯಾತ್ಮದ ದಾಸರಾದ ಮನುಷ್ಯರೊಬ್ಬರು ಹೇಳುತಿದ್ದರು, ದೇವರನ್ನು ನಿರ್ಮಲ ಮನಸ್ಸಿಂದ ಬೇಡಿಕೊಂಡರೆ ನಮ್ಮ ಇಷ್ಟಾರ್ಥಗಳು ಖಂಡಿತವಾಗಿ ಈಡೇರುತ್ತದೆ ಎಂದು. ಇದನ್ನು ಕೇಳಿ ನಾಸ್ಥಿಕನಾಗಿ ನಮ್ಮ ಮನೆಯಲ್ಲಿ ಎಲ್ಲ ಪದ್ದತಿಗಳನ್ನೂ ಹೀಯಾಳಿಸುತ್ತ, "ಬೆಕ್ಕಿನ ಮೇಲೆ ಬುಟ್ಟಿ ಮುಚ್ಚಿಡುವ" ಕತೆ ಹೇಳಿ ತಮಾಷೆ ಮಾಡುತ್ತಾ ಇದ್ದ ನಾನು  ಯಾವಾಗ ಅಪ್ಪಟ ಭಕ್ತಿ ಪಂಥಕ್ಕೆ ಸೇರಿದ ಮನುಷ್ಯನಾದೆ ಎಂಬುದೇ ತಿಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ನಾನು ದೇವರ ಪಕ್ಕಾ ಭಕ್ತನಾಗಿ ದೇವರ ನಾಮ ಸ್ಮರಣೆ ಇಲ್ಲದೆ ಯಾವ ಕೆಲಸಕ್ಕೂ ಹೆಜ್ಜೆ ಇಡದ ಮಟ್ಟಕ್ಕೆ ಬಂದು ಬಿಟ್ಟೆ. ದಿನಾಲು ಬೆಳಿಗ್ಗೆ ಎದ್ದು ದೇವರ ಸ್ತೋತ್ರ ಕೇಳುವುದು, ಹೇಳುವುದು, ಟಿವಿಯಲ್ಲಿ ಹಲವಾರು ದೇವರ ದರ್ಶನ ಮಾಡುವುದು,ಮಂಗಳಾರತಿಯಲ್ಲಿ ಪಾಲ್ಗೊಂಡಂತೆ ಕಲ್ಪಿಸಿಕೊಳ್ಳೋದು. ದಿನಭವಿಷ್ಯ ಚಾಚೂ ತಪ್ಪದೆ ನೋಡೋದು, ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಬರುವ ಎಲ್ಲ ಪರಿಹಾರಗಳನ್ನು ವಿಶೇಷ ಆಸಕ್ತಿಯಿಂದ ಪಾಲಿಸುವುದು ಹೀಗೆ ನನ್ನ ದಿನ ನಿತ್ಯದ ಚಟುವಟಿಕೆಗಳಲ್ಲಿ ಮಹತ್ತರ  ಬದಲಾವಣೆ ಕಂಡುಕೊಂಡೆ. ಹೀಗಿರುವಾಗ ದೇವಸ್ಥಾನದಲ್ಲಿ ಸಿಕ್ಕ ಭಕ್ತರೊಬ್ಬರು "ರಾಮ ನಾಮ ಜಪವನ್ನು ಒಂದು ಕೋಟಿ ಸಾರಿ ಬರೆದು ದೇವರ ಗೂಡಿನಲ್ಲಿಟ್ಟು ದಿನಾ ಪೂಜೆ ಮಾಡಿದರೆ ನಮ್ಮ ಎಲ್ಲ ಇ

ಮಕ್ಕಳ ಕಳ್ಳ

                                                          ಮಕ್ಕಳ ಕಳ್ಳ              ಮಕ್ಕಳು ಅಂದ್ರೆ ನನ್ಗೆ ಪ್ರಾಣ, ಮಕ್ಕಳ ಜೊತೆ ಆಟ ಆಡುತ್ತಿದ್ದರೆ ಸಮಯ ಸರಿಯೋದೆ ತಿಳಿಯೋದಿಲ್ಲ ನಂಗೆ. ನಮ್ಮೂರಿನ ಎಲ್ಲ ಬೀದಿಲ್ಲಿ ಇರುವ ಎಲ್ಲ ಮಕ್ಕಳೂ ನನ್ಗೆ ಗೊತ್ತು, ಆದರೆ ಆ ಮಕ್ಕಳಿಗೆ ನನ್ನ ಹೆಸರು ಗೊತ್ತಿಲ್ಲ, ಮುಂಚೆ ಕೆಲವು ಮಕ್ಕಳು ನನ್ನನ್ನು ನೋಡಿ ಹೆದರೋದು ಇತ್ತು. ಹಾಗೆ ಹೆದರೋಕೆ ಕಾರಣನೂ ಒಂದು ಕತೆಯೇ.               ಮಕ್ಕಳು ಅಂದ್ರೆ ನಂಗೆ ಇಷ್ಟ ಅನ್ನೋ ವಿಚಾರನ ಕೆಲವು ಆಂಟಿಯರು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದರು, ಪಕ್ಕದ ಮನೆಯವರ ಜೊತೆ ಧಾರವಾಹಿಯ ಬಗ್ಗೆ ಚರ್ಚೆ ಮಾಡೋಕೆ ಸಮಯ ಸಿಕ್ಕಾಗ ಮಕ್ಕಳನ್ನು ನೋಡಿಕೊಳ್ಳೋಕೆ ಯಾರದ್ರೂ ಬೇಕಲ್ಲ? ಆಗ ಎಲ್ಲರಿಗೂ ನನ್ನ ಹೆಸರೇ ನೆನಪಾಗುತ್ತಿತ್ತು. ನನ್ನ ಜೊತೆ ಮಕ್ಕಳನ್ನು ಆಟ ಆಡೋಕೆ ಬಿಟ್ಟು ಬಟ್ಟೆ ತೊಳಿಯೋಕೆ ಹೋಗೋರು, ಸೊಸೈಟಿಗೆ ಹೋಗೋರು,ಹೀಗೆ ತುಂಬಾ ಜನ ನನ್ನ ಉಚಿತ ಸೇವೆ ಉಪಯೋಗಿಸಿಕೊಳ್ತಾ ಇದ್ರು.               ಹೀಗಿರುವಾಗ ಒಂದು ದಿನ ಮಗುವೊಂದಕ್ಕೆ ಊಟ ಮಾಡಿಸೋದು ಕಷ್ಟವಾದಾಗ ಒಬ್ಬಳು ಆಂಟಿಗೆ ಖತರ್ನಾಕ್ ಐಡಿಯಾ ಒಂದು ಹೊಳೆದಿತ್ತು, ಅದೇನೆಂದರೆ ಮಗುವಿಗೆ  ನನ್ನನ್ನು ತೋರಿಸಿ "ನೋಡು ನೀನು ಊಟ ಮಾಡದೆ ಇದ್ರೆ ಆ ಮಕ್ಕಳ ಕಳ್ಳನಿಗೆ ನಿನ್ನನ್ನು ಹಿಡಿದು ಕೊಡ್ತೇನೆ" ಅಂತ ಹೇಳಿದ್ದು. ಅವಳ ಐಡಿಯಾ ಸಾಕಷ್ಟು ಪ್ರಭಾವ ಮಗುವಿನ ಮೇಲೆ ಬಿದ್ದು ಬೇಗ ಊಟ ಮಾಡ

haage annisida kathe

ಹಾಗೆ ಸುಮ್ಮನೆ ಏನಾದರು ಗೀಚೋಣ ಅಂದಾಗ, ನಾನು ಸುಮ್ಮನೆ ಕುಳಿತಿದ್ದಾಗ ಹೀಗೊಂದು ಕಥೆ ಬರೆಯಬಹುದು ಅಂದುಕೊಂಡಿದ್ದೆಲ್ಲ ಅಕ್ಷರ ರೂಪಕ್ಕಿಳಿಸಬೇಕು ಎನ್ನಿಸುತ್ತದೆ ಅಂಥಹ ಮೊದಲ ಪ್ರಯತ್ನವೇ ಈ ಕಥೆ . ಈ ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು,...............,,,ನಿಮಗೆ ಗೊತ್ತಿದೆ.                                                               ಪಿಕ್ ಪಾಕೆಟ್ ಪ್ರತೀ ಸಾರಿ ಊರಿಂದ ಬರುವಾಗಲೂ ಒಂದೇ ಚಿಂತೆ , ದುಡ್ಡು ಹೇಗೆ ಉಳಿಸೋದು ? ಖರ್ಚು ಹೇಗೆ ಕಮ್ಮಿ ಮಾಡೋದು ಅಂತೆಲ್ಲ . ಅಪ್ಪ ಹೇಳುತ್ತಿದ್ದ ಮಾತುಗಳು ಆಗಾಗ ಕಿವಿಯಲ್ಲಿ ರಿನ್ಗಿಣಿಸಿದಂತೆ ಅನ್ನಿಸುತಿತ್ತು . ಆತ ಯಾವಾಗಲು ಹೇಳುತ್ತಾನೆ "ಉಳಿಸಿದ ಹಣವೇ ಗಳಿಸಿದ ಹಣ "ಅಂಥಾ, ಹೌದು ಹೇಳೋದು ಸುಲಭ ಆಚರಣೆಗೆ ತರೋದು ಭಾಳ ಕಷ್ಟ ಅಲ್ಲವೇ? ತಿಂಗಳ ಸಂಬಳ ಹತ್ತನೇ ತಾರೀಕು ಹೊತ್ತಿಗೆ ನೂರರ ಲೆಕ್ಕದಲ್ಲಿದ್ದಾಗ ಅಂದುಕೊಳ್ಳೋದು, "ಮುಂದಿನ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಉಳಿಸಬೇಕು , ನನ್ನ ಸಾಮರ್ಥ್ಯದ ಬಗ್ಗೆ ನನಗೇ ಆಶ್ಚರ್ಯವಾಗಬೇಕು" ಹೀಗೆಲ್ಲ..ಅಂದುಕೊಳ್ಳುತ್ತಿದ್ದಾಗಲೇ  ಸಾರಿಗೆ ಬಸ್ಸು ಜೋರಾಗಿ ಉಸಿರು ಬಿಡುತ್ತಾ ಹೊರಟೆ ಬಿಡ್ತು. ಭಾರತೀ ಬೀದಿ ದಾಟುವಷ್ಟರಲ್ಲಿ ನಾಲ್ಕು ಜನರಿದ್ದ ಬಸ್ಸು ನಲವತ್ತಾಯ್ತು , ಊರು ದಾಟುವಾಗ ಅದರ ಎರಡರಷ್ಟಾಗಿ ಶಿವಮೊಗ್ಗ ತಲುಪುವುದು ಅನುಮಾನವಾಗಿ ಕಾಣಿಸ ಹತ್ತಿತು. ರಶ್ ನಡುವೆ ಯಾವಾಗ ಟಿಕೆಟ್ ತಗೊಂಡೆ ಯಾ