Posts

Showing posts from 2012

Bradbury, Ray pedestrian ಕತೆಯ ಅನುವಾದ 'ಪಾದಚಾರಿ' ನನ್ನ version..,

ಪಾದಚಾರಿ ಮಾರ್ಗದಲ್ಲಿ ಆತ ಸಾಗುತ್ತಿದ್ದ., ಪೋಲಿಸರಿಬ್ಬರು ಆತನನ್ನು ತಡೆದರು. ಆತ ಯಾರು ಏನು ಎಂಬ ಹಲವು ಪ್ರಶ್ನೆಗಳನ್ನು ಕೇಳಿದ ನಂತರ ಆತ  ಮಾನಸಿಕ ಅಸ್ವಸ್ಥ  ಎಂಬ ಹಣೆ ಪಟ್ಟಿ ಹಚ್ಚಿ ಮಾನಸಿಕ ಆಸ್ಪತ್ರೆಗೆ ಸಾಗಿಸಿದರು. ಹಿನ್ನೆಲೆ : ಲಿಯೋನರ್ಡ್ ಮೀಡ್ ನಿಗೆ ಸಂಜೆಗತ್ತಲಲ್ಲಿ ನಿರ್ಮಾನುಷ ಬೀದಿಗಳಲ್ಲಿ ಸುತ್ತಾಡುವ ಆಸೆ. ಆತನಿಗೆ ಕುಳಿರ್ಗಾಳಿಗೆ ಮೈ ಒಡ್ಡಿ ನಡೆಯುವುದೇ ಒಂದು ಹಿತ. ಆದರೆ ಯಾವ ಮನುಷ್ಯ ಪ್ರಾಣಿಗಳೂ ಸಹ ಸೂರ್ಯಾಸ್ತದ ನಂತರ ಮನೆಯಿಂದ ಕಾಲಿಡುವ ಕಾಲವೇ ಅದಾಗಿರಲಿಲ್ಲ. ಸಂಜೆಯ ನಂತರ ಟೀವಿ ನೋಡುತ್ತಾ ಕಳೆಯುವುದೇ ಸಹಜವೆನ್ನುವ ವಾತಾವರಣ ಸೃಷ್ಟಿಯಾಗಿತ್ತು. ಜನರು ತಮ್ಮ ಸೃಜನಶೀಲತೆಯನ್ನು ಮರೆತು ಯಾರದೋ ಕಲ್ಪನೆಯ ಕೂಸಿನ ಸೀರಿಯಲ್ಲುಗಳನ್ನ ನೋಡಿ ಆನಂದಿಸುತ್ತಿದ್ದರು. ಮುಗೀತು ಮುಗೀತು ಅಂದರೂ ಮುಗಿಯದ ಕೋರ್ಟ್ ಸೀನುಗಳನ್ನು ನೋಡಿ ಸೀನುತ್ತಿದ್ದರು, ಆಕಳಿಸುತ್ತಿದ್ದರು. ಈ ಹಿಂದೆ ಮೀಡ್ ನ ಅಜ್ಜ ಆತ ಸಣ್ಣವನಿದ್ದಾಗ ಹೇಳಿದ ಕತೆಯ ಪ್ರಕಾರ ಮೀಡ್ ನ  ಅಜ್ಜನ ಕಾಲದಲ್ಲಿ ಜನ ನಡೆದುಕೊಂಡೇ ಓಡಾಡುತ್ತಿದ್ದರು, ವಾಹನಗಳ, ಲಿಫ್ಟುಗಳ ಮೇಲೆ ಅವಲಂಬಿತರಾಗದೇ ಸಿಟಿ ಬಸ್ಸುಗಳಲ್ಲಿ, ಟ್ರೈನ್ ಗಳಲ್ಲಿ ನೇತಾಡದೆ ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ಸಾಗುತ್ತಿದ್ದರು. ಆದ್ರೆ ಮೀಡ್ ನು ಬದುಕುತ್ತಿರುವ ಈ ಕಾಲದಲ್ಲಿ ಜನ ನಡೆಯುವುದೇ ಇಲ್ಲ. ಬೊಜ್ಜಿಗೆ, ರೋಗಗಳಿಗೆ ಮದ್ದಿದೆ ಹಾಗು ಮದ್ದಿಗೆ ಜನರ ಬಳಿ ದುಡ್ಡಿದೆ. ಜನರು ತಮ್ಮ ಅವಯವಗಳಿಂದ ಬೆವರು

ಮರಳಿ ಬರುವೆನು ಗೂಡಿಗೆ

ಮರಳಿ ಬರುವೆನು ಗೂಡಿಗೆ  ಬೀಸುವ ಗಾಳಿಯ ಮೊರೆತದಲಿ  ಕೇಳಿದ ಹಾಗಿದೆ ಆ ಹೆಸರು. ನೋವಲಿ ಹತ್ತಿದ ಕಿಡಿ ಆಗ. ದೂರದಲಿ ಉಳಿದೆ ನಾನೀಗ  ಉರಿಯುತಿದೆ ಮೈಯಲ್ಲಿ ಉರಿಯಾಗಿ. ನೋವಿದು ಉಳಿದಿದೆ ಎಂದೆಂದೂ                                                      ಮರಳಿ ಬರುವೆನು ಗೂಡಿಗೆ                                                     ಊರಿನ ಗಾಳಿಯ ತಂಪಿನ್ನೂ                                                     ಮೈಯನು ಸೋಕಿದ ಹಾಗಿದೆ                                                      ಮಣ್ಣಿನ ಪರಿಮಳ ಮಳೆಯಲ್ಲಿ                                                      ಎದೆಯಲಿ ಬೆಚ್ಚಗಿದೆ ಹಸಿರಾಗಿ    ದೂರದ ಊರಲಿ ಹೆಸರೇನು  ಹಣವೇನು ಮನೆಯೇನು   ನಾನು ನನ್ನವರು  ಎನ್ನೋದು  ಉಳಿಯೋದು ಊರಲಿ ಮಾತ್ರ.                                                     ಮರಳಿ ಬರುವೆನು ಗೂಡಿಗೆ                                                      ಅಲ್ಲಿದೆ ನಮ್ಮನೆ. ಇಲ್ಲಿರೋದು ಸುಮ್ಮನೆ.                                                     ತುತ್ತಿನ ಚೀಲದ ಹಸಿವೆಯನು                                                      ನೀಗಿಸೋ ಕಾರಣ ಈ ದೂರ. ಇಲ್ಲಿಯ ಪರಮಾನ್ನ ಮ್ರುಷ್ಟಾನ್ನಕಿಂತ. ಊರಿನ ಗಂಜಿಯ ರುಚಿ ಹೆಚ್ಚು. ಇಲ್ಲಿಯ ಏಸಿಯ ತಂಪಲ್ಲಿ  ಊರ

please forgive me- bryan adams

ನಮಗಿದಿನ್ನೂ ಮೊದಲ ಇರುಳು ಎನಿಸುತ್ತಿದೆ  

ಲಲಿತ ಪ್ರಬಂಧ 'ಸೊಳ್ಳೆಗಳೊಡನೆ ಸೆಣಸಾಟ"

                                   ಲಲಿತ  ಪ್ರಬಂಧ  'ಸೊಳ್ಳೆಗಳೊಡನೆ ಸೆಣಸಾಟ"   ಮನುಷ್ಯ ಮಾತ್ರರಾದೊಡನೆ ನಮಗೆ ಯಾವ ಪ್ರಾಣಿಗಳಿಂದಲೂ ಯಾವ ತೊಂದರೆಯೂ ಆಗಬಾರದು ಎನ್ನುವುದು ಸರಿಯಲ್ಲ , ಏಕೆಂದರೆ ಮನುಷ್ಯ ಮಾತ್ರರಿಗಲ್ಲದೆ ಸಕಲ ಜೀವಿಗಳಿಗೂ ಸೇರಿದೆ ನಮ್ಮ ಭೂಮಿ. ನಮ್ಮ ದಿನನಿತ್ಯದ ಜೀವನದಲ್ಲಿ ಎದುರಾಗುವ ಪ್ರಾಣಿಗಳು (ಕ್ರಿಮಿ ಕೀಟಗಳೂ ಸೇರಿದಂತೆ) ಅವುಗಳ ಹಾಗು ನಮ್ಮ ನಡುವಿನ ತಿಕ್ಕಾಟದ ವಿಶ್ಲೇಷಣೆಯೇ ಈ ಪ್ರಬಂಧ. ಗಾಳಿ ಬೆಳಕಿಗಾಗಿ ತೆಗೆದಿಟ್ಟ ಕಿಟಕಿ ಬಾಗಿಲುಗಳಿಂದ 

NOTHING I HAVE EVER KNOWN.

                                   ನನಗೆ ತಿಳಿದಿರಲಿಲ್ಲ        ನನಗೆ ತಿಳಿದಿರಲಿಲ್ಲ                                      ಗಾಳಿಗೆ ಸಿಲುಕಿದ ತರಗೆಲೆಯಂತೆ                                     ನಾನಿರುವೆ ಈಗ,                                     ಬೀಸುವ ಪರಿಯೇನೋ                                      ಸಾಗುವ ದಿಕ್ಕೆಲ್ಲೋ.       ನಾನೆಂದೂ ಹೋಗಲಾರದ        ಜಾಗಕೆ ಬಂದು ತಲುಪಿದೆ,       ಸುರುಳಿ ಸುತ್ತುತಿದೆ ಚಕ್ರ;       ಒಂದೆಡೆ ನೀನು       ಮತ್ತೊಂದೆಡೆ ನಾನು,       ಹರಿಯುತಿದೆ ಮನವೆಲ್ಲ ನಿನ್ನೆಡೆಗೆ.                                     ಹೇಳಲಾಗದ ಹಾಡು ಪದಗಳಲಿ                                     ಹೇಳಲಾಗುವುದು ಇಷ್ಟೇ,                                     ಬದಲಿಸಿದೆ ನನ್ನ ನೀನು.       ನನಗೆಂದೂ ಇವೆಲ್ಲ ತಿಳಿದಿರಲಿಲ್ಲ       ಹೀಗೆಲ್ಲ ಅನಿಸುವುದು ಎಂದು       ನನಗೆಂದೂ ಹೀಗೆಲ್ಲ ಕಂಡಿರಲಿಲ್ಲ       ನಿನಗಾಗಿ ನಾನು ಬಂದಿರುವೆನೆಂದು.                                    ನಾ ಸೋತಿರುವೆ ಪದಗಳಲಿ                                    ಕೇಳಲಾಗುವುದು ಇಷ್ಟೇ,                                    ನಿನ್ನ ಸ್ವರದ ಸಾಂತ್ವನ.       ನೀ ಬಂದೆ ಜೊತೆಯಾಗಿ ಇಂದು        ನನ್ನ ಮನಸಿಗೆ ಬಲ ಇಷ್ಟೊಂದಿದೆಯೇ,       ತಿಳಿದಿರಲಿಲ್