ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ. ಇಂಡಿಯಾ ದೇಶದ ಅಪಾಯಗಳಲ್ಲಿ ಪ್ರಮುಖವಾದದ್ದು ಭವಿಷ್ಯದೆಡೆಗೆ ನಿಖರ ಗುರಿ ಹೊಂದಿರದೆ ಹಾಗೆಯೇ ಮುಂದೆ ಸಾಗುತ್ತಿರುವ ಯುವಜನತೆ. ಯುವಜನತೆ ಸರಿಯಾದ ದಾರಿ ದಿಕ್ಕು ತೋರಿದರೆ ಮಾತ್ರ ದೇಶಕ್ಕೆ ಆಸ್ತಿ ಹಾಗೂ ಅಭಿವೃದ್ಧಿಗೆ ದಾರಿ. ಅದೇ ಇವರುಗಳು ಗೊತ್ತುಗುರಿಯಿಲ್ಲದೇ ಸಾಗುತ್ತಿದ್ದರೆ, ಇವರುಗಳು ಒಂತರ ಟೈಂಬಾಂಬ್ ಎಂದೇ ಹೇಳಬಹುದು, ಏಕೆಂದರೆ ಹೀಗಾದಲ್ಲಿ ಈ ಯುವಜನತೆ ಮಾನವ ಸಂಪನ್ಮೂಲ ವಾಗುವ ಬದಲು ಜನಸಂಖ್ಯಾ ಸ್ಫೋಟದಂತಹ ಸಮಸ್ಯೆಯಾಗಲೂಬಹುದು,ನಂತರದಲ್ಲಿ ನಿರುದ್ಯೋಗ, ಸಾಮಾಜಿಕ ಪಿಡುಗುಗಳು, ಸಂಸ್ಕಾರದ ಕೊರತೆ, ಮುಂತಾದ ರೋಗಗಳಿಗೆ ಕಾರಣವಾಗಬಹುದು. ಇದರಲ್ಲಿ ಯಾವುದೇ ಅನುಮಾನವಿಲ್ಲ. ದಾರಿತಪ್ಪಿದ ಇಂತಹ ಯುವಜನತೆಯ ಪೈಕಿ ಒಬ್ಬ ಯುವಕನ ಕಥೆಯೇ "ಕುರುಡು ಮಂತ್ರ" ಎಂದು ಹೇಳಬಹುದು. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಥವಾ ತನ್ನ guilt ಅನ್ನು ಮರೆಮಾಚಲು ಆಧ್ಯಾತ್ಮ, ಧರ್ಮ, ಪ್ರವಚನಗಳಲ್ಲಿ ತೊಡಗಿಕೊಂಡರೆ ಏನಾಗಬಹುದು ಎಂಬುದಕ್ಕೆ ಟೀಕಪ್ಪನಿಗಿಂತ ಬೇರೆ ಉದಾಹರಣೆ ಬೇಕೆ? ಇಲ್ಲಿ ಟೀಕಪ್ಪ ಯುವ ಜನತೆಯ ರೆಪ್ರೆಸೆಂಟೇಟಿವ್ ನಂತೆ ಕಂಡುಬರುತ್ತಾನೆ, ಅದಲ್ಲದೆ ಯುವ ಸಂಸ್ಕೃತಿಯ ಪ್ರತಿಬಿಂಬವು ಸಹಿತ ಆಗಿದ್ದಾನೆ. ಕಾದಂಬರಿಯು ಹದಿಹರೆಯದ ತಲ್ಲಣಗಳು, ಬಂಡಾಯ ಮನೋಭಾವ, ಕಾಮದೆಡಗಿನ ಕುತೂಹಲ,ಕೌತುಕ ಹಾಗು ಅದರ ಬಗೆಗಿನ ಮಡಿವಂತಿಕೆ, ...
“Autobiographical elements in Chetan Bhagat’s fiction Two States”. (A paper presented at the Dept of English, Kuvempu University) DEEPAK DONGRE G. Lecturer in English. GRWPT SHIMOGA. RESEARCH SCHOLAR. VSKU BALLARI. 10.04.2018 Keywords: Autobiographical elements, popular fiction, Chetan Bhagat. Life writing is a form of autobiographical writing, considered non-fiction and includes autobiography, biogr...
ಬಸ್ಸಿನಲ್ಲಿ ಜೊತೆಜೊತೆಯಾಗಿ ಪ್ರಯಾಣಿಸುತ್ತಿದ್ದ ದಂತ ವೈದ್ಯರಿಬ್ಬರ ನಡುವೆ ವಾಗ್ವಾದ ಶುರುವಾಗಿತ್ತು . "ಎದುರಿನ ಸೀಟಿನಲ್ಲಿ ಕುಳಿತ ವ್ಯಕ್ತಿಯ ದವಡೆ ಬಾತಿದೆ, ಅವನು ದಂತಕುಳಿ ಸಮಸ್ಯೆಯಿಂದ ಬಳಲುತ್ತಿದ್ದಾನೆ". ಎಂದ ಮೊದಲ ವೈದ್ಯ . "ಇದನ್ನು ಸಿಮೆಂಟ್ ಹಾಕಿ ಭರ್ತಿ ಮಾಡಿದರೆ ಸಮಸ್ಯೆಗೆ ಪರಿಹಾರವೂ ಇದೆ", ಎಂದು ಸೇರಿಸಿದ . ಎರಡನೇ ವೈದ್ಯ ಇದಕ್ಕೆ ಸಮ್ಮತಿಸಲಿಲ್ಲ , ಆತನೆಂದ "ಆತನ ವಸಡಿನಲ್ಲಿ ಸಮಸ್ಯೆ ಇರುವುದರಿಂದ ಹಲ್ಲುಗಳು ಅಲುಗಾಡುತ್ತಿವೆ , ವಸಡು ಊದಿರುವ ಕಾರಣದಿಂದಾಗಿ ಆತನ ದವಡೆ ಊದಿದಂತೆ ಕಾಣಿಸುತ್ತಿದೆ, ಎಂದ . ಅಷ್ಟರಲ್ಲಿ ಎದುರುಗಡೆ ಸೀಟಿನಲ್ಲಿ ಕುಳಿತವನು ಸರಕ್ಕನೆ ಕಿಟಕಿ ತೆಗೆದು ಪಿಚಕ್ ಎಂದು ಬಾಯಲ್ಲಿ ತುಂಬಿಕೊಂಡಿದ್ದ ಎಲೆಅಡಿಕೆ ಯನ್ನು ಉಗಿದ, ದವಡೆ ಊತ ಮಾಯವಾಗಿತ್ತು . ಇಬ್ಬರೂ ದಂತವೈದ್ಯರ ಬಿಳೀ ಕೋಟಿನ ಮೇಲೆ ಕೆಂಪನೆಯ ಹನಿಗಳ ಗುರುತುಗಳಾಗಿದ್ದವು .
Comments
Post a Comment