Posts

ಸ್ಪೆಷಾಲಿಟಿ

Image
ಬಸ್ಸಿನಲ್ಲಿ ಜೊತೆಜೊತೆಯಾಗಿ ಪ್ರಯಾಣಿಸುತ್ತಿದ್ದ ದಂತ ವೈದ್ಯರಿಬ್ಬರ ನಡುವೆ ವಾಗ್ವಾದ ಶುರುವಾಗಿತ್ತು . "ಎದುರಿನ ಸೀಟಿನಲ್ಲಿ ಕುಳಿತ ವ್ಯಕ್ತಿಯ ದವಡೆ ಬಾತಿದೆ, ಅವನು ದಂತಕುಳಿ ಸಮಸ್ಯೆಯಿಂದ ಬಳಲುತ್ತಿದ್ದಾನೆ". ಎಂದ ಮೊದಲ ವೈದ್ಯ . "ಇದನ್ನು ಸಿಮೆಂಟ್ ಹಾಕಿ ಭರ್ತಿ ಮಾಡಿದರೆ ಸಮಸ್ಯೆಗೆ ಪರಿಹಾರವೂ ಇದೆ", ಎಂದು ಸೇರಿಸಿದ . ಎರಡನೇ ವೈದ್ಯ ಇದಕ್ಕೆ ಸಮ್ಮತಿಸಲಿಲ್ಲ , ಆತನೆಂದ "ಆತನ ವಸಡಿನಲ್ಲಿ ಸಮಸ್ಯೆ ಇರುವುದರಿಂದ ಹಲ್ಲುಗಳು ಅಲುಗಾಡುತ್ತಿವೆ , ವಸಡು ಊದಿರುವ ಕಾರಣದಿಂದಾಗಿ ಆತನ ದವಡೆ ಊದಿದಂತೆ ಕಾಣಿಸುತ್ತಿದೆ, ಎಂದ . ಅಷ್ಟರಲ್ಲಿ ಎದುರುಗಡೆ ಸೀಟಿನಲ್ಲಿ ಕುಳಿತವನು ಸರಕ್ಕನೆ ಕಿಟಕಿ ತೆಗೆದು  ಪಿಚಕ್ ಎಂದು ಬಾಯಲ್ಲಿ ತುಂಬಿಕೊಂಡಿದ್ದ ಎಲೆಅಡಿಕೆ ಯನ್ನು ಉಗಿದ, ದವಡೆ ಊತ ಮಾಯವಾಗಿತ್ತು . ಇಬ್ಬರೂ ದಂತವೈದ್ಯರ ಬಿಳೀ ಕೋಟಿನ ಮೇಲೆ ಕೆಂಪನೆಯ ಹನಿಗಳ ಗುರುತುಗಳಾಗಿದ್ದವು . 

Bradbury, Ray pedestrian ಕತೆಯ ಅನುವಾದ 'ಪಾದಚಾರಿ' ನನ್ನ version..,

ಪಾದಚಾರಿ ಮಾರ್ಗದಲ್ಲಿ ಆತ ಸಾಗುತ್ತಿದ್ದ., ಪೋಲಿಸರಿಬ್ಬರು ಆತನನ್ನು ತಡೆದರು. ಆತ ಯಾರು ಏನು ಎಂಬ ಹಲವು ಪ್ರಶ್ನೆಗಳನ್ನು ಕೇಳಿದ ನಂತರ ಆತ  ಮಾನಸಿಕ ಅಸ್ವಸ್ಥ  ಎಂಬ ಹಣೆ ಪಟ್ಟಿ ಹಚ್ಚಿ ಮಾನಸಿಕ ಆಸ್ಪತ್ರೆಗೆ ಸಾಗಿಸಿದರು. ಹಿನ್ನೆಲೆ : ಲಿಯೋನರ್ಡ್ ಮೀಡ್ ನಿಗೆ ಸಂಜೆಗತ್ತಲಲ್ಲಿ ನಿರ್ಮಾನುಷ ಬೀದಿಗಳಲ್ಲಿ ಸುತ್ತಾಡುವ ಆಸೆ. ಆತನಿಗೆ ಕುಳಿರ್ಗಾಳಿಗೆ ಮೈ ಒಡ್ಡಿ ನಡೆಯುವುದೇ ಒಂದು ಹಿತ. ಆದರೆ ಯಾವ ಮನುಷ್ಯ ಪ್ರಾಣಿಗಳೂ ಸಹ ಸೂರ್ಯಾಸ್ತದ ನಂತರ ಮನೆಯಿಂದ ಕಾಲಿಡುವ ಕಾಲವೇ ಅದಾಗಿರಲಿಲ್ಲ. ಸಂಜೆಯ ನಂತರ ಟೀವಿ ನೋಡುತ್ತಾ ಕಳೆಯುವುದೇ ಸಹಜವೆನ್ನುವ ವಾತಾವರಣ ಸೃಷ್ಟಿಯಾಗಿತ್ತು. ಜನರು ತಮ್ಮ ಸೃಜನಶೀಲತೆಯನ್ನು ಮರೆತು ಯಾರದೋ ಕಲ್ಪನೆಯ ಕೂಸಿನ ಸೀರಿಯಲ್ಲುಗಳನ್ನ ನೋಡಿ ಆನಂದಿಸುತ್ತಿದ್ದರು. ಮುಗೀತು ಮುಗೀತು ಅಂದರೂ ಮುಗಿಯದ ಕೋರ್ಟ್ ಸೀನುಗಳನ್ನು ನೋಡಿ ಸೀನುತ್ತಿದ್ದರು, ಆಕಳಿಸುತ್ತಿದ್ದರು. ಈ ಹಿಂದೆ ಮೀಡ್ ನ ಅಜ್ಜ ಆತ ಸಣ್ಣವನಿದ್ದಾಗ ಹೇಳಿದ ಕತೆಯ ಪ್ರಕಾರ ಮೀಡ್ ನ  ಅಜ್ಜನ ಕಾಲದಲ್ಲಿ ಜನ ನಡೆದುಕೊಂಡೇ ಓಡಾಡುತ್ತಿದ್ದರು, ವಾಹನಗಳ, ಲಿಫ್ಟುಗಳ ಮೇಲೆ ಅವಲಂಬಿತರಾಗದೇ ಸಿಟಿ ಬಸ್ಸುಗಳಲ್ಲಿ, ಟ್ರೈನ್ ಗಳಲ್ಲಿ ನೇತಾಡದೆ ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ಸಾಗುತ್ತಿದ್ದರು. ಆದ್ರೆ ಮೀಡ್ ನು ಬದುಕುತ್ತಿರುವ ಈ ಕಾಲದಲ್ಲಿ ಜನ ನಡೆಯುವುದೇ ಇಲ್ಲ. ಬೊಜ್ಜಿಗೆ, ರೋಗಗಳಿಗೆ ಮದ್ದಿದೆ ಹಾಗು ಮದ್ದಿಗೆ ಜನರ ಬಳಿ ದುಡ್ಡಿದ...

ಮರಳಿ ಬರುವೆನು ಗೂಡಿಗೆ

ಮರಳಿ ಬರುವೆನು ಗೂಡಿಗೆ  ಬೀಸುವ ಗಾಳಿಯ ಮೊರೆತದಲಿ  ಕೇಳಿದ ಹಾಗಿದೆ ಆ ಹೆಸರು. ನೋವಲಿ ಹತ್ತಿದ ಕಿಡಿ ಆಗ. ದೂರದಲಿ ಉಳಿದೆ ನಾನೀಗ  ಉರಿಯುತಿದೆ ಮೈಯಲ್ಲಿ ಉರಿಯಾಗಿ. ನೋವಿದು ಉಳಿದಿದೆ ಎಂದೆಂದೂ                                                      ಮರಳಿ ಬರುವೆನು ಗೂಡಿಗೆ                                                     ಊರಿನ ಗಾಳಿಯ ತಂಪಿನ್ನೂ                                                 ...

please forgive me- bryan adams

ನಮಗಿದಿನ್ನೂ ಮೊದಲ ಇರುಳು ಎನಿಸುತ್ತಿದೆ  

ಲಲಿತ ಪ್ರಬಂಧ 'ಸೊಳ್ಳೆಗಳೊಡನೆ ಸೆಣಸಾಟ"

                                   ಲಲಿತ  ಪ್ರಬಂಧ  'ಸೊಳ್ಳೆಗಳೊಡನೆ ಸೆಣಸಾಟ"   ಮನುಷ್ಯ ಮಾತ್ರರಾದೊಡನೆ ನಮಗೆ ಯಾವ ಪ್ರಾಣಿಗಳಿಂದಲೂ ಯಾವ ತೊಂದರೆಯೂ ಆಗಬಾರದು ಎನ್ನುವುದು ಸರಿಯಲ್ಲ , ಏಕೆಂದರೆ ಮನುಷ್ಯ ಮಾತ್ರರಿಗಲ್ಲದೆ ಸಕಲ ಜೀವಿಗಳಿಗೂ ಸೇರಿದೆ ನಮ್ಮ ಭೂಮಿ. ನಮ್ಮ ದಿನನಿತ್ಯದ ಜೀವನದಲ್ಲಿ ಎದುರಾಗುವ ಪ್ರಾಣಿಗಳು (ಕ್ರಿಮಿ ಕೀಟಗಳೂ ಸೇರಿದಂತೆ) ಅವುಗಳ ಹಾಗು ನಮ್ಮ ನಡುವಿನ ತಿಕ್ಕಾಟದ ವಿಶ್ಲೇಷಣೆಯೇ ಈ ಪ್ರಬಂಧ. ಗಾಳಿ ಬೆಳಕಿಗಾಗಿ ತೆಗೆದಿಟ್ಟ ಕಿಟಕಿ ಬಾಗಿಲುಗಳಿಂದ 

NOTHING I HAVE EVER KNOWN.

                                   ನನಗೆ ತಿಳಿದಿರಲಿಲ್ಲ        ನನಗೆ ತಿಳಿದಿರಲಿಲ್ಲ                                      ಗಾಳಿಗೆ ಸಿಲುಕಿದ ತರಗೆಲೆಯಂತೆ                                     ನಾನಿರುವೆ ಈಗ,                                     ಬೀಸುವ ಪರಿಯೇನೋ                  ...

ಫೇಸ್ಬುಕ್ ನ ಶಾರ್ಟ್ ಫಾರ್ಮ್ ಕನ್ನಡದಲ್ಲಿ (ನನ್ನ ಅನರ್ಥಕೋಶದ ಪ್ರಕಾರ)

Image
ಫೇಸ್ಬುಕ್ ನ ಶಾರ್ಟ್ ಫಾರ್ಮ್ ಕನ್ನಡದಲ್ಲಿ (ನನ್ನ ಅನರ್ಥಕೋಶದ ಪ್ರಕಾರ) 1. ASAP: As Soon As Possible                 ಸಾಧ್ಯವಾದರೆ ಮಾಡ್ತೀನಿ, ಮುಗಿಯೋವರೆಗೆ ತಾಳ್ಮೆಯಿಂದ ಕಾಯಿ, ಇಲ್ಲಾಂದ್ರೆ ಸಾಯಿ.    2. ASL: Age/ Sex/ Location                          ನಮ್ಮೂರಿನ ಹುಡುಗೀನಾ?    3. B4: Before                                                         ಮುಂಚೆ    4. B4U: Before You                              PÀuÉÚzÀÄgÀÄ    5. BRB: Be Right Back                         ...