ಮಕ್ಕಳ ಕಳ್ಳ

                                                          ಮಕ್ಕಳ ಕಳ್ಳ
             ಮಕ್ಕಳು ಅಂದ್ರೆ ನನ್ಗೆ ಪ್ರಾಣ, ಮಕ್ಕಳ ಜೊತೆ ಆಟ ಆಡುತ್ತಿದ್ದರೆ ಸಮಯ ಸರಿಯೋದೆ ತಿಳಿಯೋದಿಲ್ಲ ನಂಗೆ. ನಮ್ಮೂರಿನ ಎಲ್ಲ ಬೀದಿಲ್ಲಿ ಇರುವ ಎಲ್ಲ ಮಕ್ಕಳೂ ನನ್ಗೆ ಗೊತ್ತು, ಆದರೆ ಆ ಮಕ್ಕಳಿಗೆ ನನ್ನ ಹೆಸರು ಗೊತ್ತಿಲ್ಲ, ಮುಂಚೆ ಕೆಲವು ಮಕ್ಕಳು ನನ್ನನ್ನು ನೋಡಿ ಹೆದರೋದು ಇತ್ತು. ಹಾಗೆ ಹೆದರೋಕೆ ಕಾರಣನೂ ಒಂದು ಕತೆಯೇ.
              ಮಕ್ಕಳು ಅಂದ್ರೆ ನಂಗೆ ಇಷ್ಟ ಅನ್ನೋ ವಿಚಾರನ ಕೆಲವು ಆಂಟಿಯರು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದರು, ಪಕ್ಕದ ಮನೆಯವರ ಜೊತೆ ಧಾರವಾಹಿಯ ಬಗ್ಗೆ ಚರ್ಚೆ ಮಾಡೋಕೆ ಸಮಯ ಸಿಕ್ಕಾಗ ಮಕ್ಕಳನ್ನು ನೋಡಿಕೊಳ್ಳೋಕೆ ಯಾರದ್ರೂ ಬೇಕಲ್ಲ? ಆಗ ಎಲ್ಲರಿಗೂ ನನ್ನ ಹೆಸರೇ ನೆನಪಾಗುತ್ತಿತ್ತು. ನನ್ನ ಜೊತೆ ಮಕ್ಕಳನ್ನು ಆಟ ಆಡೋಕೆ ಬಿಟ್ಟು ಬಟ್ಟೆ ತೊಳಿಯೋಕೆ ಹೋಗೋರು, ಸೊಸೈಟಿಗೆ ಹೋಗೋರು,ಹೀಗೆ ತುಂಬಾ ಜನ ನನ್ನ ಉಚಿತ ಸೇವೆ ಉಪಯೋಗಿಸಿಕೊಳ್ತಾ ಇದ್ರು.
              ಹೀಗಿರುವಾಗ ಒಂದು ದಿನ ಮಗುವೊಂದಕ್ಕೆ ಊಟ ಮಾಡಿಸೋದು ಕಷ್ಟವಾದಾಗ ಒಬ್ಬಳು ಆಂಟಿಗೆ ಖತರ್ನಾಕ್ ಐಡಿಯಾ ಒಂದು ಹೊಳೆದಿತ್ತು, ಅದೇನೆಂದರೆ ಮಗುವಿಗೆ  ನನ್ನನ್ನು ತೋರಿಸಿ "ನೋಡು ನೀನು ಊಟ ಮಾಡದೆ ಇದ್ರೆ ಆ ಮಕ್ಕಳ ಕಳ್ಳನಿಗೆ ನಿನ್ನನ್ನು ಹಿಡಿದು ಕೊಡ್ತೇನೆ" ಅಂತ ಹೇಳಿದ್ದು. ಅವಳ ಐಡಿಯಾ ಸಾಕಷ್ಟು ಪ್ರಭಾವ ಮಗುವಿನ ಮೇಲೆ ಬಿದ್ದು ಬೇಗ ಊಟ ಮಾಡಿ ಮುಗಿಸಿತು, ಆದರೆ ನನ್ಗೆ "ಮಕ್ಕಳ ಕಳ್ಳ" ಎಂಬ ಹಣೆಪಟ್ಟಿ ಶಾಶ್ವತವಾಗಿ ಉಳಿದುಹೊಯ್ತು.ಅಂದಿನಿಂದ ಹೆದರುವ ಮಕ್ಕಳಿಗೆ ನನ್ನನ್ನು ತೋರಿಸಿ ತಾಯಂದಿರು ತಮ್ಮ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಂಡರು, ಹೆದರದ ಮಕ್ಕಳು ನನ್ನನ್ನು ನೋಡಿ "ಮಕ್ಕಳ ಕಳ್ಳ, ಮಕ್ಕಳ ಕಳ್ಳ" ಎಂದು ಕೂಗಿ ತಮಾಷೆ ಮಾಡತೊಡಗಿದರು. ಹೀಗೆ ನನ್ನ ಪರಿಸ್ತಿತಿ ಶೋಚನೀಯವಾಗಿರುವಾಗ ಒಂದು ಘಟನೆ ನಡೆಯಿತು. 
               ಊರಿನಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡಿ ಪೋಷಕರಿಂದ ದುಡ್ಡು ವಸೂಲಿ ಮಾಡೋ ಒಂದು ತಂಡ ವ್ಯಾಪಕವಾಗಿ ಕೆಲಸ ಮಾಡಲು ಪ್ರಾರಂಬ ಮಾಡಿತ್ತು. ನಮ್ಮ ಮನೆ ಹತ್ತಿರದ ಜನ ನನ್ನನ್ನು "ಮಕ್ಕಳ ಕಳ್ಳ" ಅಂತ ಕರೀತಾ ಇದ್ದ ವಿಷಯ ಪೋಲಿಸ್ ಒಬ್ಬನಿಗೆ ಹೇಗೋ ತಿಳಿದು, ನನ್ನ ಮೇಲಿನ ಅನುಮಾನದಿಂದ ನನ್ನನ್ನು ಪೋಲಿಸ್ ಸ್ಟೇಷನ್ಗೆ ವಿಚಾರಣೆಗೆ ಅಂತ ಪೋಲಿಸ್ ಸ್ಟೇಷನ್ಗೆ ಕರೆತಂದಿದ್ದಾನೆ. ವಿಚಾರಣೆಯ ವಿವಿದ ರೀತಿ, ವಿಧಾನಗಳು ಸ್ವಲ್ಪ ಹೊತ್ತಿಗೆ ನನ್ಗೆ ಅರಿವಾಗಲಿದೆ. ಕಂಬಿ ಎಣಿಸಿ ಬೇಜಾರಾದಾಗ ದಫೆದಾರರ ದಯೆಯಿಂದ ಪೇಪರ್ ಪೆನ್ನು ಗಳಿಸಿ ಈ ಕಥೆ ಬರೆದಿದ್ದೇನೆ. ನನಗಾಗುತ್ತಿರುವ ಈ ಶಿಕ್ಷೆಗೆ ಕಾರಣ ಯಾರು ಅಂತ ಯೋಚನೆ ಮಾಡುತ್ತಿದ್ದೇನೆ.

ಇವತ್ತಿನ ಕತೆ ಮುಕ್ತಾಯ. ಮುಂದಿನ ಕತೆ ನನ್ಗೆ ಏನಾದ್ರೂ ಹೊಳೆದಾಗ.


Comments

  1. meshtre - Kathe munduvaresi.. ode thindro ilvo antha gothagbeku :)

    ReplyDelete
  2. Ode thinnokke idenu nijavada katheye? Idu kevala kalpanika! Chennagide, chennagide!!

    ReplyDelete

Post a Comment

Popular posts from this blog

ಔರಂಗಾಬಾದ್ ನ ದೇವಗಿರಿ ಕೋಟೆ.

Prefixes and suffixes

ENGLISH COMMUNICATION FOR POLYTECHNIC STUDENTS SYLLABUS AND DETAILED CONTENT 15CP01E