bhoomi


ಭೂಮಿ

ಅದರಿಂದಾಗಿಯೇ ಇಷ್ಟೆಲ್ಲಾ ಆಗಿದೆಯೇ ಎಂಬುದೇ ನನ್ನ ಚಿಂತೆಗೆ ಕಾರಣವಾಗಿತ್ತು. ಆದರೆ ಒಂದು ಸಣ್ಣ ಕಬ್ಬಿಣದ ತುಂಡಿನಿಂದ ಹೊಡೆದ ಪೆಟ್ಟು ಇಷ್ಟು ಜೋರಾದ ಶಬ್ಧ ಹೊರಡಿಸುವುದು ಸಾಧ್ಯವಿಲ್ಲ ಎಂದುಕೊಂಡ ನಾನು, ಹೊರಗೆ ಹೋಗಿ ನೋಡುವುದು ಅವಶ್ಯಕ ಎಂದುಕೊಂಡೆ.

ಆಗಿದ್ದಿಷ್ಟು, ನಮ್ಮ ಮನೆಯ ಹತ್ತಿರದಲ್ಲೇ ಇರುವ ನರಸಿಂಹ ಪರ್ವತದಲ್ಲಿ ಒಂದು ಗುಹೆ ಇದ್ದಿದ್ದು ನಮಗೆ ಬಾಲ್ಯದಿಂದಲೂ ಕುತೂಹಲ ಕೆರಳಿಸಿದ್ದ ವಿಷಯವಾಗಿತ್ತು, ಆದರೆ ಅದರೊಳಗೆ ಇಣುಕಿ ನೋಡುವುದು ಅಥವಾ ಅದರಿಂದ ಎಲ್ಲೆಲ್ಲಿಗೆ ದಾರಿಗಳು ತೆರೆದುಕೊಳ್ಳುತ್ತದೆ ಎಂಬುದರ ಬಗೆಗಿನ ವಿವರಗಳು ಯಾರಿಗೂ ತಿಳಿದಿರಲಿಲ್ಲ. ಅವರಿವರು ಹೇಳಿದ ಅಂತೆ ಕಂತೆಗಳೆಲ್ಲಾ ಸೇರಿ ನಮ್ಮ ಕುತೂಹಲವೂ ಬೆಳೆಯುತ್ತಾ ಹೋದರೂ ಕೂಡ, ನಮ್ಮಲ್ಲಿ ಯಾರಿಗೂ ಅದರ ಒಳಕ್ಕೆ ಹೋಗುವ ಧೈರ್ಯ ಬಂದಿರಲಿಲ್ಲ. ನಾವು ಬೆಳೆದರೂ ಗುಹೆಯ ಒಳಗಿಳಿಯಲು ಬೇಕಾದ ಧೈರ್ಯ ನಮ್ಮಲ್ಲಿ ಬೆಳೆಯಲೇ ಇಲ್ಲ.

ಗೆಳೆಯರ ಗುಂಪಿನಲ್ಲಿದ್ದ ಎಲ್ಲರಿಗೂ ಸಹ ಚಾರಣ, ಸುತ್ತಾಟ ಸಾಹಸದ ಕೆಲಸಗಳೂ ಅಂದರೆ ಬಹಳ ಇಷ್ಟ, ಆದರೆ ಪರ್ವತದ ಬಳಿ ಇದ್ದ ಗುಹೆಯ ಬಗ್ಗೆ ಮಾತನಾಡಿದ ತಕ್ಷಣ ಎಲ್ಲರೂ ಬೇರೆ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಲು ಪ್ರಾರಂಭಿಸುತ್ತಿದ್ದರು ಅಥವಾ ವಿಷಯಾಂತರ ಮಾಡುತ್ತಿದ್ದರು. ಇದಕ್ಕೆಲ್ಲಾ ಕಾರಣ ಗುಹೆಯ ಬಗೆಗಿದ್ದ ಕತೆಗಳು.

    ವಾರದ ಕೊನೆಯೊಂದರಲ್ಲಿ ನಾನು ಪರ್ವತದ ಗುಹೆಯ ಅನ್ವೇಷಣೆಗೆ ಹೊರಟು ನಿಂತೆ. ಯಾರು ಬರಲಿ ಬಿಡಲಿ ನಾನಂತೂ ಧೈರ್ಯಶಾಲಿ ಎಂದು ತೋರಿಸುವ ನಿಧರ್ಾರಕ್ಕೆ ನಾನು ಬಂದಾಗಿತ್ತು. ಗೆಳೆಯರೆಲ್ಲಾ ಎಂದಿನಂತೆ ಕೆಲಸ ಕಾರ್ಯಗಳ ಸಬೂಬು ಕೊಟ್ಟು ಕೊನೆಗೆ ಕೈ ಕೊಡುವ ಸೂಚನೆಯನ್ನು ಕೊಟ್ಟಾಗಿತ್ತು. ಊರಿಗೆ ಹೋಗುವಾಗ ಬೇಕಾದ ಸಾಮಗ್ರಿಗಳನ್ನೆಲ್ಲಾ ಬೆನ್ನಿನ ಚೀಲಕ್ಕೆ ತುಂಬಿಕೊಂಡೆ. ಮನೆಯವರೆಲ್ಲಾ ಬೇಡ ಬೇಡವೆನ್ನುತ್ತಾರೆ ಎಂದು ತಿಳಿದುಕೊಂಡಿದ್ದ ನಾನು ಮನೆಯಲ್ಲಿ ಯಾರಿಗೂ ಹೇಳದೆ ಹೊರಡುವ ಯೋಜನೆ ಹಾಕಿಕೊಂಡಿದ್ದೆ. ಗೆಳೆಯರೆಲ್ಲಾ ಹುಷಾರು ಕಣೋ ಎಂದರಷ್ಟೇ ವಿನಹಾ ಧೈರ್ಯಕ್ಕೆ ಜೊತೆಗೆ ನಾನು ಬರುತ್ತೇನೆ ಎನ್ನಲೇ ಇಲ್ಲ.
    ಗುಹೆಯೊಳಗೆ ಇಳಿಯುವಾಗ ಅವರಿವರು ಹೇಳಿದ ಆತ್ಮದ ಕತೆಗಳೋ, ಬ್ರಹ್ಮರಾಕ್ಷಸನೇನಾದ್ರೂ ಎದುರು ಬರಬಹುದೇನೋ ಅಂತೆಲ್ಲಾ ಅನ್ನಿಸುತಿತ್ತು. ಆಗಲೇ ನಾನು ಆ ಸದ್ದು ಕೇಳಿದ್ದು. ಎದುರುಗಡೆಯಿದ್ದ ಬಂಡೆ ಗಟ್ಟಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಸುತ್ತಿಗೆಯಿಂದ ಸಣ್ಣ ಪೆಟ್ಟು ಕೊಟ್ಟಿದ್ದಷ್ಟೇ. ಜೋರಾದ ಸದ್ದು ಕೇಳಿದಂತಾಯ್ತು. ಗುಹೆಯ ಅತೀ ಆಳದಲ್ಲಿ ಹಲವಾರು ಕವಲುಗಳನ್ನು ದಾಟಿ ನುಗ್ಗಿದ್ದ ನನಗೆ ವಾಪಾಸಾಗುವ ದಾರಿಯೂ ಕಷ್ಟಕರವಾಗಿಯೇ ಇತ್ತು. ಇಳಿಯುವುದು, ಹತ್ತುವುದೂ, ಬಂಡೆಗಳ ಸಂಧಿಗಳಲ್ಲಿ ದಾರಿಗಳನ್ನು ನಿರೀಕ್ಷಿಸುವುದೂ, ಕೆಲವು ಕಡೆಗಳಲ್ಲಿ ದಾರಿ ಮಾಡಿಕೊಳ್ಳುವುದೂ ಹೀಗೆ ಸಾಗುತ್ತಿದ್ದ ನನಗೆ ಗುಹೆಯ ಬಗೆಗೆ ಏನಾದರೂ ಒಂದು ನಿಶ್ಚಿತ ಉತ್ತರ ಬೇಕಾಗಿತ್ತು. ಹೊರಗಡೆಯ ಲೋಕದ ಜನರಿನ ಊಹಾಪೋಹಗಳಿಗೆ ಎದುರಾಗಿ ನಾನೇನಾದರೂ ಹೇಳಬೇಕಾಗಿತ್ತು. ಹಾಗೆ ಹೇಳಿದ ವಿಷಯವನ್ನು ನಾನೇ ಸಾಕ್ಷಿ ಸಮೇತ ತೋರಿಸಿ ಹೆಸರು ಮಾಡಬೇಕು ಎಂಬುದು ಮಾತ್ರ ನನ್ನ ಉದ್ದೇಶವಾಗಿತ್ತು. ಅಷ್ಟರಲ್ಲಿ ಈ ಸದ್ದು ಕೇಳಿ ನಾನು ಹೊರಗಡೆ ಹೋಗುವ ಯೋಚನೆ ಮಾಡಲೇ ಬೇಕಾಯಿತು. ಸುಮಾರು ಹೊತ್ತಿನ ಭೀಕರ ಪ್ರಯತ್ನಗಳ ಫಲವಾಗಿ ಮತ್ತೆ ನನಗೆ ಸೂರ್ಯನನ್ನು ನೋಡುವ ಅವಕಾಶ ಸಿಕ್ಕಿಯೇ ಬಿಟ್ಟಿತು. ಪಿಕಾಸಿಯ ತುದಿಯಿಂದ ಗುಹೆಯ ಗೋಡೆಗಳನ್ನು ಗುದ್ದುತ್ತಿದ್ದ ನನಗೆ ಟೊಳ್ಳು ಟೊಳ್ಳು ಏನೋ ತಾಗಿದ ಅನುಭವವಾಗಿ ಜೋರಾಗಿ ಗುದ್ದಿ ತೆಗೆದಾಗ ಗಾಳಿಯ ಅನುಭೂತಿಯಾಗಿ ಹೋದ ಜೀವ ಮತ್ತೆ ಬಂತು. ಸ್ವಲ್ಪ ಹೊತ್ತಿನಲ್ಲಿಯೇ ನಾನು ಭೂಮಿಯೊಳಗಿಂದ ಮತ್ತೆ ಭೂಮಿಯ ಮೇಲಕ್ಕೆ ಬಂದೆ.

ನಾನೀಗ ಇದ್ದ ಜಾಗ ಬಹುಶಃ, ನಾನು ಗುಹೆಯ ಬಾವಿಯೊಳಗೆ ಇಳಿದ ಜಾಗಕ್ಕಿಂತ ಬೇರೆ ಕಡೆಯೆಲ್ಲೋ ಇದ್ದಹಾಗಿತ್ತು. ಕಾಲುದಾರಿಯನ್ನು ಸೇರಿದ ನಾನು ಹಳ್ಳಿಯನ್ನು ತಲುಪುವಾಗ ಗುಹೆಯೊಳಗೆ ಇದ್ದಾಗ ಕೇಳಿದ ಸದ್ದಿನ ಮೂಲ  ತಿಳಿಯತೊಡಗಿತ್ತು. ಅಲ್ಲೆಲ್ಲಾ ಒಂದು ತರಹದ ಕಮಟು ವಾಸನೆ ತುಂಬಿತ್ತು. ಹಳ್ಳಿಯ ಯಾವ ಮನೆಯಲ್ಲೂ ಯಾವ ಮನುಷ್ಯರ ಇರುವಿಕೆಯೇ ಕಾಣುತ್ತಿರಲಿಲ್ಲ. ಎಲ್ಲರೂ ಊರು ಬಿಟ್ಟು ಹೋಗಿ ಶತಮಾನವಾಗಿದೆಯೇನೋ ಅನ್ನಿಸುವಷ್ಟು ನಿಶ್ಯಬ್ಧ. ಯಾವುದೋ ದೊಡ್ಡ ಭೂಕಂಪವೋ ಅಥವಾ ಬಾಂಬ್ ಸ್ಪೋಟವೋ ಏನೋ ದುರಂತದಿಂದಾಗಿಯೇ ಹೀಗಾಗಿರ ಬಹುದೇ ಎನ್ನಿಸತೊಡಗಿತು.
ಹೊರಬಂದ ನನಗೆ ಆಶ್ಚರ್ಯ ಕಾದಿತ್ತು, ಹೊರಗಡೆ ಮೋಡ ಕವಿದಂತಹಾ ವಾತಾವರಣ, ಬಾಂಬ್ ಸ್ಪೋಟವೋ ಅಥವಾ ನಿಸರ್ಗದ ವೈಪರಿತ್ಯಗಳಿಂದಾಗಿಯೋ ಗೊತ್ತಿಲ್ಲ ಆದರೆ ಇಡೀ ಪ್ರಪಂಚವೇ ಬದಲಾದಂತೆ ಕಾಣಿಸುತ್ತಿತ್ತು. ಮನೆಗೆ ಹೊರಟ ನನಗೆ ಇನ್ನೂ ಹಲವು ಆಶ್ಚರ್ಯಗಳು ಕಾದಿದ್ದವು, ಈ ಆಶ್ಚರ್ಯಗಳು ನನ್ನನ್ನು ಆತಂಕಕ್ಕೂ ಈಡುಮಾಡಿತು.
ಅರ್ಧ ಇಂಚು ಜಾಗಕ್ಕೂ ನಡೆಯುತ್ತಿದ್ದ ಜಗಳಗಳೆಷ್ಟು? ಗೊಂದಲಗಳೆಷ್ಟು? ಕೋಟರ್ಿನಲ್ಲಿ ನಡೆಯುತ್ತಿದ್ದ ಪ್ರಕರಣಗಳೆಷ್ಟು? ಇಗಿಲ್ಲೇನಿದೆ? ಬರೀ ಮಣ್ಣು.. ಬೇಲಿ ಹಾಕಲು ಬೇಲಿ ಕಂಬಗಳೇನೋ ಸಾಕಷ್ಟಿದೆ ಆದರೆ ಹಾಕಿಕೊಂಡು ತಮ್ಮದಾಗಿಸಿಕೊಳ್ಳಬೇಕಾದ ಜನರೇ ನಾಪತ್ತೆ.
ಬೆಂಕಿ ತಾಗಿಸಿದಾಗಿ ಕರಟಿ ಹೋಗುವಂತೆ ಗಿಡ ಮರ ಬಳ್ಳಿಗಳು, ಹುಲ್ಲುಗಾವಲುಗಳು ಕಪ್ಪಾಗಿದ್ದವು..ಅವೆಲ್ಲವುಗಳ ಬಣ್ಣ ಕೆಂಪಗೆ ಸುಟ್ಟ ಕಿಟ್ಟಪ್ಪನ ಅಂಗಡಿಯ ರೊಟ್ಟಿಯಂತಾಗಿತ್ತು.
ಕೆಲವು ಘಂಟೆಗಳ ನಡುಗೆಯ ಬಳಿಕ ನನಗೆ ಭಯಾನಕ ಸತ್ಯವೊಂದರ ಅರಿವಾಗಿತ್ತು, ನಾನು ಗುಹೆಯ ಒಳಗೆ ಇಳಿಯುವ ಮುಂಚಿನ ಹಾಗೂ ಹೊರಬರುವ ಮಧ್ಯೆ ನಡೆದ ಯಾವುದೋ ಅನಾಹುತಕ್ಕೆ ಬಹುಶಃ ಇಡೀ ಭೂಮಿ ಬರಿದಾಗಿತ್ತು.

ನಾನು ಗುಹೆಯ ಒಳಗಿನ ಸತ್ಯ ಹುಡುಕ ಹೊರಟ ಮುಂಚೆ

ಭೂಮಿಯಲ್ಲಿದ್ದ ಜನರೆಲ್ಲರಲ್ಲೂ ಇನ್ನೂ ಬೇಕು ಎಂಬ ಹಪಹಪಿಯಿತ್ತು, ಸಂಗ್ರಹಿಸಿದಷ್ಟೂ ಸಾಲದೆನ್ನುವಂತೆ ಹಣದ ಮೇಲಿನ ಮೋಹವಿತ್ತು, ಇದ್ದಷ್ಟೂ ಸಾಲದೆನ್ನುವ ಭೂಮಿಯ ದಾಹವಿತ್ತು ಇವೆಲ್ಲವೂ ಮನುಷ್ಯರಿಗೆ ತಾವೇನೋ ಅಮರರೇನೋ ಎನ್ನುವ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು. ಆದರೆ ಗಾಕರ್ಿ ಹೇಳಿದಂತೆ ಕಿಲೋಮೀಟರ್ಗಳಷ್ಟು ಭೂಮಿಯಿದ್ದರೂ ಭೂಮಿಯ ಒಡೆಯನನ್ನು ಸುಡೋದಕ್ಕೆ ಅಥವಾ ಹೂಳೋದಕ್ಕೆ ಬೇಕಿರೋದು ಹೆಚ್ಚು ಕಮ್ಮಿ ಆರಡಿ ಮೂರಡಿ ಭೂಮಿ ಅಷ್ಟೇ ತಾನೆ.. ಒಂದು ವ್ಯತ್ಯಾಸ ಅಂದ್ರೆ ಶ್ರೀಮಂತರಿಗೆ ಗಂಧದ ಕಟ್ಟಿಗೆ ತುಪ್ಪ, ಬಡವರಿಗೆ ಸೀಮೆಎಣ್ಣೆ ಹಲಸಿನ ಕಟ್ಟಿಗೆ. ಶ್ರೀಮಂತರಿಗೆ ರೇಶ್ಮೆ ವಸ್ತ್ರದಲ್ಲಿ ಸುತ್ತಿದರೆ ಬಡವರನ್ನ ಸುತ್ತೋದು ಹತ್ತಿ ಬಟ್ಟೆಯಲ್ಲಿ.. ಇವೆಲ್ಲ ಮನುಷ್ಯ ಸತ್ತಮೇಲೆ ನೋಡದ, ಆತನಿಗೆ ಗೊತ್ತಾಗದ ಸಂಗತಿಗಳು...

ಗುಹೆಯ ಒಳಗಿನಿಂದ ಹೊರಬಂದನಂತರ

ಮನುಷ್ಯನಿಗೆ ಬೇಕೆಂದರೆ ಇಡೀ ಭೂಮಿ ಲಭ್ಯ ಆದರೆ ಒಡೆತನಕ್ಕೆ ಮನುಷ್ಯನೇ ಇಲ್ಲಾ. ನಾನೊಬ್ಬನೆ ಬದುಕಿರುವ ನಾಗರೀಕ ಪ್ರಾಣಿಯಾಗಿರುವುದರಿಂದ ನನಗೀಗ ಯಾವ ಭೂಮಿಯೂ ಬೇಡವಾಗಿದೆ. ಬಹುಶಃ ನನ್ನ ತರಹ ನೂರೆಂಟು ಜನ ಬದುಕಿದ್ದಿದ್ದರೆ ನಾನೂ ಸಹ ಅವರೊಡನೆ ಸ್ಪಧರ್ೆಗೆ ಬಿದ್ದು ಭೂಮಿಗೆ ಬೇಲಿ ಸುತ್ತತೊಡಗುತ್ತಿದ್ದೆನೇನೋ? ನೋಡುವ ಕರುಬುವ ಜನರೇ ಇಲ್ಲದಿರುವಾಗ ಗಳಿಸಿ ನಾನು ಪಡುವ ಸುಖವಾದರೂ ಏನು?
ಮಾತನಾಡಲು ಜನರಿಲ್ಲ, ಬೆರೆಯಲು ಸಮಾಜವಿಲ್ಲ, ಕಷ್ಟಗಳು ಬರಲು ಸಾಧ್ಯವಿಲ್ಲ ಏಕೆಂದರೆ ಕಷ್ಟಗಳನ್ನು ಸುರಿಸುವ ಜನರೆ ಇಲ್ಲ. ಏಕಾಂಗಿತನ ಹೊರತುಪಡಿಸಿದರೆ ನಾನೊಬ್ಬ ಸಂಪೂರ್ಣ ಪರಿಪೂರ್ಣ ಜೀವಿ. ಯಾರ ಭಯ ನನಗಿಲ್ಲ., ಸಿರಿತನದ ವ್ಯಾಖ್ಯೆಗಳಿಗೆ ಈಗ ಅರ್ಥವೇ ಇಲ್ಲ.
ಬೆಂಕಿ ಮಾಡಿ ಸುಟ್ಟು ತಿನ್ನಲು ರಾಬಿನ್ಸನ್ ಕ್ರೂಸೋನ ಕಥೆಯಿದೆ ನೆನಪಿನಲ್ಲಿ.. ಪ್ರಾಣಿಗಳು ಬದುಕಿದ್ದರೆ ಅವುಗಳೊಡನೆ ಮಾತನಾಡಲು ಸಾಧ್ಯವಾಗಬಹುದೇನೋ ಗೊತ್ತಿಲ್ಲ., ಮನುಷ್ಯರಿದ್ದಾಗ ಪ್ರಾಣಿಗಳ ಜೊತೆ ಮಾತನಾಡುವ ಅವುಗಳನ್ನು ಅಥರ್ೈಸಿಕೊಳ್ಳುವ ಅಗತ್ಯ ಯಾರಿಗೂ ಇರಲಿಲ್ಲ., ಈಗ ನನಗಾದರೂ ಅವಕಾಶ ಸಿಕ್ಕಿದ್ದರೆ ಒಳ್ಳೆಯದಿತ್ತು.

ಇಡೀ ಭೂಮಿ ನನ್ನದೇ ಆದರೆ ಯಾವುದೂ ನನ್ನದಲ್ಲ., ಭೂಮಿಯಿಡೀ ಹುಡುಕಿದರೂ ನಾನೊಬ್ಬನೇ ಶ್ರೀಮಂತ ನಾನೊಬ್ಬನೇ ಬಡವ. ಎಲ್ಲ ಜಾತಿಗೂ ಎಲ್ಲಾ ಧರ್ಮಕ್ಕೂ ಗುರುವೂ ನಾನೇ ಅನುಯಾಯಿಯೂ ನಾನೇ.,ಎಲ್ಲರಲ್ಲೂ ದೇವರಿದ್ದಾರೆ ಎನ್ನುವುದೇ ನಿಜವಾದರೆ ಇಲ್ಲೀಗ ನಾನೊಬ್ಬನೇ ದೇವರು.          

Comments

Popular posts from this blog

ಸ್ಪೆಷಾಲಿಟಿ

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.